ADVERTISEMENT

ನನ್ನೊಲವ ಹೂ ಅವನೆದೆಯಲಿ ಗಂಧವಾಗಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST
ನನ್ನೊಲವ ಹೂ ಅವನೆದೆಯಲಿ ಗಂಧವಾಗಿ
ನನ್ನೊಲವ ಹೂ ಅವನೆದೆಯಲಿ ಗಂಧವಾಗಿ   

ಕಾರಣವೇ ಇಲ್ಲದೆ ಕೆಲವರ ಮೇಲೆ ಪ್ರೇಮಾಂಕುರವಾಗುತ್ತದೆ. ‘ಅವನು ನನ್ನ ಬಳಿ ಸುಳಿದಾಡಿದಾಗೆಲ್ಲಾ, ನನ್ನೊಳಗೆ ಏನೋ ಪುಳಕ. ಅವನು ನಡೆದುಹೋದ ಗಾಳಿಯಲ್ಲೂ ಅವನ ಪ್ರೇಮ ಗಂಧವೇ ನನ್ನ ಕಾಡುತ್ತದೆ. ನನಗವನು ಇಷ್ಟ ಎಂದು ಮನಸ್ಸು ಸಾವಿರ ಬಾರಿ ಹೇಳುತ್ತಿದೆ’ ಎಂದು ನೀವು ಹೇಳುತ್ತಿರುವಾಗ, ‘ಇದೆಲ್ಲಾ ಸುಮ್ಮನೆ ನೀನೆಂದುಕೊಳ್ಳುತ್ತಿರುವ ಕಲ್ಪನೆ’ ಎಂದು ಗೆಳತಿ ಛೇಡಿಸಿದರೆ, ‘ಇದು ತಮಾಷೆಯಲ್ಲ’ ಎಂದು ಹೇಳಿ. ಏಕೆಂದರೆ ವಿಜ್ಞಾನಿಗಳು ಇದು ಸತ್ಯ ಎಂದಿದ್ದಾರೆ.

ಹುಡುಗರ ದೇಹದಿಂದ ಬರುವ ವಾಸನೆ, ಹುಡುಗಿಯರನ್ನು ಹೀಗೆ ಕಾಡಿಸುತ್ತದೆಯಂತೆ. (ಸ್ನಾನ ಮಾಡದೆ ಬರುವ ಬೆವರಿನ ದುರ್ಗಂಧವಲ್ಲ). ಪ್ರತಿ ವ್ಯಕ್ತಿಗೂ ವಿಶೇಷ ವಾಸನೆ ಇರುತ್ತದೆ. ಆಸ್ಟ್ರೇಲಿಯಾದ ಮ್ಯಾಕ್ವಾರಿ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ವಿವರಿಸಿದ್ದಾರೆ.

ಹೆಚ್ಚು ಹಣ್ಣು ತಿನ್ನುವ ವ್ಯಕ್ತಿಯ ದೇಹದ ಗಂಧವನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರಂತೆ. ಸಂಶೋಧಕ ಡಾ. ಇಯಾನ್ ಸ್ಟೀಫನ್ ಅವರ ಪ್ರಕಾರ, ಒಬ್ಬ ವ್ಯಕ್ತಿಯ ಮೇಲೆ ಮೋಹಗೊಳ್ಳಲು ಆತನ ದೇಹದ ವಾಸನೆಯೂ ಕೆಲಸ ಮಾಡಿರುತ್ತದೆ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.