ADVERTISEMENT

ನಮ್ಮೂರ ಸಾಹಿತ್ಯ ಬೆಳಗುವಾಸೆ...

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
–ಕಿರಣ್ ಕರಲಟ್ಟಿ ಬನಹಟ್ಟಿ, ಬಾಗಲಕೋಟೆ
–ಕಿರಣ್ ಕರಲಟ್ಟಿ ಬನಹಟ್ಟಿ, ಬಾಗಲಕೋಟೆ   

ನಮ್ಮ ಊರಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ  ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಕ್ರಾಂತಿಕಾರಿಗಳು, ಲೇಖಕರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಆದರೆ, ಅವುಗಳಲ್ಲಿ ಕೆಲವು ಕೃತಿಗಳು ನಮಗೆ ಸಿಗುವುದಿಲ್ಲ. ಸಿಕ್ಕರೂ ಎಲ್ಲೋ ಒಂದು ಪ್ರತಿ ಮಾತ್ರ ದೊರೆಯಬಹುದು.

ನನಗೆ ಒಂದು ಕೋಟಿ ರೂಪಾಯಿ ಸಿಕ್ಕರೆ ಅಂಥ ಅಪರೂಪದ ಕೃತಿಗಳ ಮರುಮುದ್ರಣವನ್ನು ಕೈಗೊಳ್ಳುವೆ. ನಮ್ಮೂರಿನಲ್ಲಿ ಸಾಹಿತ್ಯ ಪರಿಷತ್ತು ಸ್ಥಾಪಿಸಿ, ವಾರಕ್ಕೊಮ್ಮೆ ನಮ್ಮೂರ ಸಾಹಿತ್ಯ ಸುಧೆಯ ಹೆಸರಿನಲ್ಲಿ ಹಿರಿಯ ಸಾಹಿತಿಗಳನ್ನು ಕರೆಸಿ ಸಾಹಿತ್ಯ ಸಂಭ್ರಮ ಆಚರಿಸುವೆ.

ಅಷ್ಟೇ ಅಲ್ಲದೇ ಉಳಿದ ದುಡ್ಡಿನಲ್ಲಿ ಕನ್ನಡ ಪರ ಚಟುವಟಿಕೆಗಳು ನಿರಂತರವಾಗಿ ನಡೆದುಕೊಳ್ಳುವಂತೆ ನೋಡಿಕೊಳ್ಳುವೆ. ಸಾಹಿತ್ಯ ಪರಿಷತ್ತಿನಿಂದ ಊರಿನಲ್ಲಿರುವ ಅಂಧ, ಅನಾಥರ ವೃದ್ಧರ ಶ್ರೇಯೋಭಿವೃದ್ಧಿಗೆ ದುಡಿಯುವೆ.
   –ಕಿರಣ್ ಕರಲಟ್ಟಿ ಬನಹಟ್ಟಿ, ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.