ADVERTISEMENT

ಪ್ಲೇಸ್ಟೋರ್‌ನಿಂದ ಪೂನಂ ಆ್ಯಪ್‌ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ಪ್ಲೇಸ್ಟೋರ್‌ನಿಂದ ಪೂನಂ ಆ್ಯಪ್‌ ಹೊರಕ್ಕೆ
ಪ್ಲೇಸ್ಟೋರ್‌ನಿಂದ ಪೂನಂ ಆ್ಯಪ್‌ ಹೊರಕ್ಕೆ   

‘ನಾನು ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದೇನೆ’ ಎಂದು ಘಂಟಾಘೋಷವಾಗಿ ಹೇಳಿಕೊಂಡೇ ಆಂಡ್ರಾಯ್ಡ್‌ ಆ್ಯಪ್ ಬಿಡುಗಡೆ ಮಾಡಿದ್ದ ಪೂನಂ ಪಾಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಗೂಗಲ್‌ ‘ಅಶ್ಲೀಲ’ ಎಂಬ ಕಾರಣವೊಡ್ಡಿ ತನ್ನ ಪ್ಲೇಸ್ಟೋರ್‌ನಿಂದ Poonam Pandey ಆ್ಯಪ್‌ ತೆಗೆದುಹಾಕಿದೆ. ‘ಏನಕೇನ ಪ್ರಕಾರೇಣ ಸುದ್ದಿಯಲ್ಲಿರುವುದು’ ಮುಖ್ಯ ಎಂದುಕೊಂಡಿರುವ ಪೂನಂ ಈ ಪ್ರಕರಣಕ್ಕೆ ‘ಜನಾಂಗೀಯ ವಾದ’ದ ಹೊಸ ಟ್ವಿಸ್ಟ್‌ ನೀಡಿದ್ದಾರೆ.

‘ಪ್ಲೇಬಾಯ್‌ ಆ್ಯಪ್‌ ನೋಡಿ ಅಶ್ಲೀಲ ಎಂದು ದೂರಿದವರು, ಪೂನಂ ಪಾಡೆ ಆ್ಯಪ್ ನೋಡಿ ದೂರಿದ್ದಾರೆ’ ಎಂದು ಪೂನಂ ತಮ್ಮ ಟ್ವಿಟರ್ ಪುಟದಲ್ಲಿ ಖಾರವಾಗಿ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವರು ‘ಗೂಗಲ್ ಜನಾಂಗೀಯವಾದವನ್ನು ಹೇರುತ್ತಿದೆ’ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಏ.17ರಂದು ಪೂನಂ ಆ್ಯಪ್ ಬಿಡುಗಡೆ ಮಾಡಿದ್ದು. ಪ್ಲೇಸ್ಟೋರ್‌ನಲ್ಲಿ ಆ್ಯಪ್ ಲಾಂಚ್ ಆದ ಮೊದಲ 15 ನಿಮಿಷದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದರು. ಅದೇ ದಿನ ರಾತ್ರಿ 9:37ಕ್ಕೆ ಗೂಗಲ್ ತನ್ನ ಆ್ಯಪ್ ತೆಗೆದುಹಾಕಿದೆ ಎಂದು ಪೂನಂ ಟ್ವೀಟ್ ಮಾಡಿದ್ದರು.

‘ರಾತ್ರಿ ಮಲಗೋ ಮೊದಲು ನಿನ್ನ ಆ್ಯಪ್ ನೋಡಬೇಕು ಅಂದ್ಕೊಂಡಿದ್ದೆ. ನಿರಾಸೆಯಾಗಿದೆ’ ಎಂಬ ಅಭಿಮಾನಿಯೊಬ್ಬರ ಟ್ವಿಟ್‌ಗೆ ‘ನನ್ನ ವೆಬ್‌ಸೈಟ್‌ ww.poonampandey.inನಲ್ಲಿ ಆ್ಯಪ್ ಇದೆ. ಡೌನ್‌ಲೋಡ್ ಮಾಡಿಕೊ ಡಿಯರ್’ ಎಂದು ಉತ್ತರಿಸುವ ಮೂಲಕ ಪೂನಂ ಗೂಗಲ್‌ಗೆ ಸಡ್ಡು ಹೊಡೆದಿದ್ದರು.

* ಪ್ಲೇಸ್ಟೋರ್‌ನಲ್ಲಿ ಸೆಕ್ಸ್‌ ಸ್ಟೋರಿ, ನಗ್ನ ಚಿತ್ರಗಳು ಇರುವ ಎಷ್ಟೊಂದು ಆ್ಯಪ್‌ಗಳಿವೆ. ಈ ಗೂಗಲ್‌ನವರ ಕಣ್ಣಿಗೆ ಅದು ಬೀಳಲ್ವಾ? ಇಷ್ಟಕ್ಕೂ ಆ್ಯಪ್‌ನಲ್ಲಿ ನನ್ನ ನಗ್ನ ಚಿತ್ರ ಇರಲಿಲ್ಲ.

– ಪೂನಂ ಪಾಂಡೆ, ನಟಿ

* ವೈಯಕ್ತಿಕ ಆ್ಯಪ್‌ಗಳ ಬಗ್ಗೆ ನಾವು ಪ್ರತಿಕ್ರಿಯಿಸಲ್ಲ. ನಾವು ಎಂಥ ಆ್ಯಪ್‌ಗಳನ್ನು ತೆಗೆದುಹಾಕುತ್ತೇವೆ ಎಂಬ ಮಾಹಿತಿ ಬೇಕಿದ್ದರೆ ನಮ್ಮ ಪಾಲಿಸಿಗಳನ್ನು ಓದಿಕೊಳ್ಳಿ.

– ಗೂಗಲ್ ಕಂಪೆನಿಯ ವಕ್ತಾರ

(ಮಾಹಿತಿ: ಐಎಎನ್‌ಎಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.