ADVERTISEMENT

ಬಹುಭಾಷಾ ನಟಿ ರೋಜಾ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
ನಟಿ ರೋಜಾ
ನಟಿ ರೋಜಾ   

ಬಹುಭಾಷಾ ನಟಿ ರೋಜಾ ಹುಟ್ಟಿದ ದಿನವಿಂದು (ನವೆಂಬರ್ 17, 1972). ರೋಜಾ ಅವರ ಮೂಲ ಹೆಸರು ಶ್ರೀಲತಾ ರೆಡ್ಡಿ. ‘ಪ್ರೇಮ ತಪಸ್ಸು’ ಎನ್ನುವ ತೆಲುಗು ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರೋಜಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ನಟಿಸಿದ್ದಾರೆ.

ಕುಚಿಪುಡಿ ನೃತ್ಯಗಾರ್ತಿಯೂ ಆಗಿರುವ ರೋಜಾ 2009ರಲ್ಲಿ ‘ತೆಲುಗು ದೇಶಂ’ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. ಆ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿದ್ದ ಅವರು, ನಂತರದ ದಿನಗಳಲ್ಲಿ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಸೇರಿದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕಿಯೂ ಆದರು.

ಕನ್ನಡ ಭಾಷೆಯ ಹತ್ತು ಸಿನಿಮಾಗಳಲ್ಲಿ ನಟಿಸಿರುವ ರೋಜಾ, ತಮ್ಮ ಮೇಕ್ ಅಪ್ ಮತ್ತು ಹೇರ್ ಸ್ಟೈಲ್‌ ಅನ್ನು ತಾವೇ ಮಾಡಿಕೊಳ್ಳುತ್ತಾರೆ.

ADVERTISEMENT

ಕಿರುತೆರೆಯಲ್ಲೂ ರೋಜಾ ತಮ್ಮ ಛಾಪು ಮೂಡಿಸಿದ್ದಾರೆ. ನಟಿ ಮೀನಾ, ರೋಜಾ ಅವರ ಉತ್ತಮ ಗೆಳತಿ. ಆರ್‌.ಕೆ. ಸೆಲ್ವಮಣಿ ಅವರನ್ನು ವಿವಾಹವಾಗಿರುವ ರೋಜಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.