ADVERTISEMENT

ಬೇಜಾರಾಗಿದೆಯೇ? ಸ್ಟೇಟಸ್‌ ಬದಲಿಸಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 19:30 IST
Last Updated 22 ಡಿಸೆಂಬರ್ 2017, 19:30 IST
ಬೇಜಾರಾಗಿದೆಯೇ? ಸ್ಟೇಟಸ್‌ ಬದಲಿಸಿ
ಬೇಜಾರಾಗಿದೆಯೇ? ಸ್ಟೇಟಸ್‌ ಬದಲಿಸಿ   

ಮನಸ್ಸು ಭಾರವಾಗಿದೆಯೇ? ಮನಸ್ಸಿನ ಭಾವನೆಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಲು ಹಿಂಜರಿಯುತ್ತಿದ್ದೀರಾ? ಧೈರ್ಯವಾಗಿ ಟ್ವೀಟ್‌ ಮಾಡಿ.

ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಸಂಪರ್ಕ ಇಟ್ಟುಕೊಂಡಲ್ಲಿ ನಕಾರಾತ್ಮಕ ಭಾವನೆಗಳನ್ನು ದೂರವಿರಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಸ್ನೇಹಿತರ ಜೊತೆ ಮುಖಾಮುಖಿಯಾಗಿ ಮಾತನಾಡಲು ಕಷ್ಟಪಡುವವರಿಗೆ ಭಾವನೆಗಳನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳು ಸಹಾಯ ಮಾಡುತ್ತವೆ. ಇದರಿಂದ ಅವರು ಅಂತರ್ಮುಖಿಗಳಾಗುವುದು ತಪ್ಪುತ್ತದೆ. ಮಾತ್ರವಲ್ಲ ನಕಾರಾತ್ಮಕ ಭಾವನೆಗಳಿಂದಲೂ ದೂರವಿರುತ್ತಾರೆ ಎಂದು ಹೇಳಿದೆ.

ಸೌತ್‌ ಕೆರೋಲಿನಾದ ವಿಶ್ವವಿದ್ಯಾಲಯವೊಂದರ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ನಾವು ಯಾರ ಜೊತೆಗಾದರೂ ಫೋನ್‌ ಅಥವಾ ಮುಖಾಮುಖಿ ಮಾತನಾಡಿದಾಗ ಅವರೇನೋ ಅಂದುಕೊಳ್ಳುತ್ತಾರೋ ಎಂದು ಯೋಚಿಸಿ ಹಿಂದೆ ಸರಿಯುತ್ತೇವೆ. ಆದರೆ ಫೇಸ್‌ಬುಕ್‌ ಅಥವಾ ಟ್ವಿಟ್ಟರ್‌ನಲ್ಲಿ ಮನದ ಭಾವನೆಗಳಿಗೆ ಅಕ್ಷರರೂಪ ಕೊಟ್ಟು ಸ್ಟೇಟಸ್‌ ಹಾಕಿಕೊಂಡಲ್ಲಿ ಪರೋಕ್ಷವಾಗಿ ಹೆಚ್ಚು ಜನರು ಓದುತ್ತಾರೆ. ಇದರಿಂದ ಮನವೂ ಹಗುರಾಗುತ್ತದೆ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.