ADVERTISEMENT

ಬೇಸಿಗೆ ಉಡುಗೆ

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2015, 19:30 IST
Last Updated 3 ಮಾರ್ಚ್ 2015, 19:30 IST
ಬೇಸಿಗೆ ಉಡುಗೆ
ಬೇಸಿಗೆ ಉಡುಗೆ   

ಪುರುಷರ ಲೈಫ್‌ಸ್ಟೈಲ್ ಬ್ರಾಂಡ್‌ ಗ್ರಾಸಿಂ ಬೇಸಿಗೆ ಋತುವಿಗೆ ಸಿದ್ಧಉಡುಗೆಗಳ ಉಲ್ಲಾಸದಾಯಕ ಹಾಗೂ ನೂತನ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಂಡಿರುವ ಗ್ರಾಸಿಂ ಈಗ ಕೈಗೆಟುಕುವ ದರದಲ್ಲಿ ಫ್ಯಾಷನೆಬಲ್ ಆಗಿರುವಂತಹ, ಗುಣಮಟ್ಟದ ಸಿದ್ಧಉಡುಗೆಗಳ ಶ್ರೇಣಿಯನ್ನು ಬಿಡುಗಡೆ ಮಾಡಿದೆ.

ಬೇಸಿಗೆಯಲ್ಲಿ ನಮ್ಮ ದೇಹ ಹಗುರವಾದ ಬಟ್ಟೆಗಳನ್ನು ಬಯಸುತ್ತದೆ. ಅದಕ್ಕೆಂದೇ ಗ್ರಾಸಿಂ ಕ್ಯಾಶ್ಯುವಲ್, ಫಾರ್ಮಲ್ ಹಾಗೂ ಸೆಮಿ–-ಫಾರ್ಮಲ್ ಅಂಗಿಗಳು, ಪ್ಯಾಂಟ್‌ಗಳು ಹಾಗೂ ಮೊದಲ ಬಾರಿಗೆ ಟೀ ಷರ್ಟ್‌ಗಳನ್ನು ಪರಿಚಯಿಸಿದೆ. ಈ ಸಂಗ್ರಹದಲ್ಲಿನ ಪ್ಯಾಂಟ್‌ಗಳು ಶೇ 100 ಕಾಟನ್/ಕಾಟನ್ ಬ್ಲೆಂಡ್‌ಗಳು ಹಾಗೂ ಪಾಲಿ ವಿಸ್ಕೋಸ್ ಬ್ಲೆಂಡ್‌ಗಳಿಂದ ತಯಾರಿಸಲ್ಪಟ್ಟಿದೆ.

ಆಕರ್ಷಕ ಹಳದಿ, ಕೆಂಪು, ಕಂದು ಹಾಗೂ ಹಸಿರು ಬಣ್ಣಗಳಲ್ಲಿ ಲಭ್ಯವಿರುವ ಈ ಸಂಗ್ರಹ ₨೭೯೯ರಿಂದ ಆರಂಭವಾಗಿ ₨೧೬೯೫ರವರೆಗೆ ಇದೆ. ಈ ಸಂಗ್ರಹ ಎಲ್ಲಾ ಪ್ರಮುಖ ಗ್ರಾಸಿಂ ರೀಟೆಲ್ ಮಳಿಗೆಗಳಲ್ಲಿ ಲಭ್ಯವಿದೆ.

ಟ್ರಾಕ್ಟರ್ ಮಾರುಕಟ್ಟೆಯಲ್ಲಿ ಸೊನಾಲಿಕಾ ಮಿಂಚು ಹೆವಿ ಡ್ಯೂಟಿ ಉತ್ಪನ್ನಗಳು, ಎಚ್‌ಪಿಯಲ್ಲಿ ವಿಸ್ತಾರ ಶ್ರೇಣಿ ಮತ್ತು ಉನ್ನತ ಗ್ರಾಹಕ ಸೇವೆಯಿಂದ ಸೊನಾಲಿಕಾ ಕೃಷಿಕರಲ್ಲಿ ಅತ್ಯಂತ ವಿಶ್ವಾಸಾರ್ಹ ಟ್ರಾಕ್ಟರ್ ಬ್ರಾಂಡ್ ಎನಿಸಿದೆ.

ಪ್ರತಿ ತಿಂಗಳೂ ಅಪಾರ ಯಶಸ್ಸಿನಿಂದ ಸೊನಾಲಿಕಾ ಮುನ್ನಡೆಯುತ್ತಿದ್ದು ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತಿರುವುದಲ್ಲದೆ ಯಶಸ್ಸಿನ ಹೊಸ ದಾಖಲೆಗಳನ್ನು ಮುರಿಯುತ್ತಿದೆ.
ಟ್ರಾಕ್ಟರ್‍ಸ್ ಮ್ಯಾನುಫ್ಯಾಕ್ಚರರ್‍ಸ್ ಅಸೋಸಿಯೇಷನ್ (ಟಿಎಂಎ) ಪ್ರಕಾರ ಕಂಪನಿ ಕರ್ನಾಟಕದಲ್ಲಿ ಶೇ ೩೬ರಷ್ಟು ಮೀರಿದ ಬೆಳವಣಿಗೆ ಕಂಡಿದ್ದು ಉದ್ಯಮದ ಸರಾಸರಿ ಶೇ.೬.೭ರಷ್ಟಿದೆ. ಏಪ್ರಿಲ್ ೨೦೧೪ರಿಂದ ಜನವರಿ ೨೦೧೫ರವರೆಗೆ ಉದ್ಯಮ ಋಣಾತ್ಮಕ ಪ್ರವೃತ್ತಿ ತೋರಿದರೂ ಸೊನಾಲಿಕಾ ಶೇ.೫೭.೯ರಷ್ಟು ಪ್ರಗತಿ ಸಾಧಿಸಿದೆ ಎಂದು ಕಂಪೆನಿ ಹೇಳಿಕೊಂಡಿದೆ.

‘ಕರ್ನಾಟಕದ ಕೃಷಿಕರು ನಮ್ಮ ಮೇಲೆ ಇರಿಸಿರುವ ವಿಶ್ವಾಸ ನಮ್ಮನ್ನು ಬಹಳ ವಿನೀತಗೊಳಿಸಿದೆ. ನಮ್ಮ ಪೋಷಕರ ನಿರೀಕ್ಷೆಗಳನ್ನು ಪೂರೈಸಲು ನಾವು ಕೆಲಸ ಮಾಡುವುದಲ್ಲದೆ ವಿನೂತನ ಉತ್ಪನ್ನಗಳನ್ನು ಅನ್ವೇಷಿಸುತ್ತಲೇ ಇರುತ್ತೇವೆ’ ಎಂದಿದ್ದಾರೆ ಕಂಪನಿಯ ಮಾರ್ಕೆಟಿಂಗ್‌ ವಿಭಾಗದ ವಿ.ಪಿ.ಕುಮಾರ್ ಬಿಮಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.