ADVERTISEMENT

ಮದುವೆ ಗೇಮ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 19:30 IST
Last Updated 10 ಸೆಪ್ಟೆಂಬರ್ 2017, 19:30 IST
ಮದುವೆ ಗೇಮ್‌
ಮದುವೆ ಗೇಮ್‌   

ಅರೇಂಜ್ಡ್‌ ಮ್ಯಾರೇಜ್‌ ಎಂದರೆ ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿಯುವುದು ಎನ್ನುವ ಕಲ್ಪನೆ ಅನೇಕರದ್ದು. ಅರೇಂಜ್ಡ್‌ ಮ್ಯಾರೇಜ್‌ನಿಂದ ತಪ್ಪಿಸಿಕೊಳ್ಳುವ ಆಟವೊಂದನ್ನು ಪಾಕಿಸ್ತಾನದ ನಶ್ರಾ ಬಲಗಂವಾಲಾ ಅಭಿವೃದ್ಧಿಪಡಿಸಿದ್ದಾರೆ. ಅವರಿಗಿನ್ನೂ 24ರ ಹರೆಯ.

ಅರೇಂಜ್ಡ್‌! ಎನ್ನುವ ಹೆಸರುಳ್ಳ ಈ ಆಟದಲ್ಲಿ ಮದುವೆ ಮಾಡಿಸುವ ದಲ್ಲಾಳಿಗಳು ಮೂವರು ಹೆಣ್ಣುಮಕ್ಕಳ ಹುಡುಕಾಟದಲ್ಲಿ ತೊಡಗಿರುತ್ತಾರೆ. ಹುಡುಗಿಯರು ಬಗೆಬಗೆ ಕಾರಣ ನೀಡುತ್ತಾ ತಪ್ಪಿಸಿಕೊಳ್ಳುತ್ತಾರೆ. ಆಟ ಗೆದ್ದವರು ಕೊನೆಯಲ್ಲಿ ‘ಮಿಸ್ಟರ್‌ ರೈಟ್‌‘ನನ್ನು ಮದುವೆಯಾದರೆ, ಸೋತವರು ಅರೇಂಜ್ಡ್‌ ಮ್ಯಾರೇಜ್‌ ಮಾಡಿಕೊಳ್ಳುತ್ತಾರೆ.

‘ಮದುವೆ ವಿಷಯಕ್ಕೆ ನಾನು ಅನುಭವಿಸಿದ ಮಾನಸಿಕ ಒತ್ತಡ ಹಾಗೂ ಅದರಿಂದ ಹೊರಬರಲು ನಾನು ಹುಡುಕಿಕೊಂಡ ಮಾರ್ಗಗಳನ್ನೇ ಈ ಆಟದಲ್ಲಿಯೂ ಅಳವಡಿಸಿದ್ದೇನೆ. ನಿಶ್ಚಿತಾರ್ಥ ಆಗಿದೆ ಎಂದು ತೋರಿಸಲು ರಿಂಗ್‌ ಹಾಕಿಕೊಳ್ಳುತ್ತಿದ್ದುದು, ಕಪ್ಪಾಗಿ ಕಾಣಲಿ ಎಂದು ಲೋಶನ್‌ ಹಚ್ಚಿಕೊಳ್ಳುತ್ತಿದ್ದು, ಬೇಕೆಂದೇ ಹುಡುಗರೊಂದಿಗೆ ಸುತ್ತಾಡುವುದು ಮಾಡುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ ಬಲಗಂವಾಲಾ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.