ADVERTISEMENT

‘ಮನೆ ಸಾಲ ತೀರಿಸುತ್ತೇನೆ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 19:30 IST
Last Updated 13 ನವೆಂಬರ್ 2017, 19:30 IST
ದೃಶ್ಯಾ ಆರ್‌. ಶೆಟ್ಟಿ
ದೃಶ್ಯಾ ಆರ್‌. ಶೆಟ್ಟಿ   

‘ನನಗೆ ಒಂದು ಕೋಟಿ ರೂಪಾಯಿ ಸಿಕ್ಕಿದರೆ ಪಪ್ಪ ನಮ್ಮ ಹೊಸ ಮನೆಗಾಗಿ ಮಾಡಿರುವ ಬ್ಯಾಂಕ್‌ ಸಾಲವನ್ನು ‌ತೀರಿಸುತ್ತೇನೆ. ಅದು ನನ್ನ ಮೊದಲ ಗುರಿ. ಉಳಿದ ದುಡ್ಡಿನಲ್ಲಿ ನನಗೊಂದು ಐ ಫೋನ್‌ ಕೊಳ್ಳುತ್ತೇನೆ. ಇನ್ನೂ ತುಂಬಾ ದುಡ್ಡು ಮಿಕ್ಕುತ್ತದೆ. ಅದರಲ್ಲಿ ನನಗೆ ಬೇಕಾದ್ದನ್ನೆಲ್ಲಾ ತೆಗೆದುಕೊಳ್ಳುತ್ತೇನೆ. ಅಂದರೆ ಹೊಸ ಚಪ್ಪಲಿಗಳು, ನೇಲ್‌ ಪಾಲಿಶ್‌, ಒಂದಷ್ಟು ಹೊಸ ಬಟ್ಟೆ, ಮೇಕಪ್ ಕಿಟ್‌... ಹೀಗೆ ನನ್ನ ಇಡೀ ವಾರ್ಡ್‌ರೋಬ್‌ನಲ್ಲಿ ಹೊಸ ವಸ್ತುಗಳನ್ನೇ ತುಂಬಿಸಿಬಿಡುತ್ತೇನೆ.

ಆಮೇಲೂ ದುಡ್ಡು ಖಾಲಿ ಆಗುವುದಿಲ್ವಲ್ಲ? ಅಷ್ಟೂ ದುಡ್ಡನ್ನು ನನ್ನ ಬ್ಯಾಂಕ್‌ ಖಾತೆಗೆ ಜಮಾ ಮಾಡುವಂತೆ ಅಮ್ಮನ ಕೈಗೆ ಕೊಡುತ್ತೇನೆ. ಆ ದುಡ್ಡಿನಿಂದ ನಾನು ಎಷ್ಟು ಬೇಕಾದರೂ ಓದಬಹುದು. ಪಪ್ಪ ಮತ್ತು ಅಮ್ಮನಿಗೆ ನನ್ನ ಚಿಂತೆಯೇ ಇರುವುದಿಲ್ಲ!
–ದೃಶ್ಯಾ ಆರ್‌. ಶೆಟ್ಟಿ, ಆರ್‌ಎನ್‌ಎಸ್‌ ವಿದ್ಯಾನಿಕೇತನ, ವಿಜಯನಗರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT