ADVERTISEMENT

ಮಹಾತ್ಮ ಕಬೀರದಾಸ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2016, 19:30 IST
Last Updated 7 ಸೆಪ್ಟೆಂಬರ್ 2016, 19:30 IST
ಮಹಾತ್ಮ ಕಬೀರದಾಸ
ಮಹಾತ್ಮ ಕಬೀರದಾಸ   

ಶ್ರೀರಾಮ ಭಕ್ತನಾದ ಸಂತ ಕಬೀರನ ಕಥನ ಭಾರತಾದ್ಯಂತ ವಿವಿಧ ರೀತಿಯಲ್ಲಿ ಹರಡಿಕೊಂಡಿದೆ. ಆತನ ಕಾವ್ಯ ರಚನೆಯ ಭಾಷೆ ಯಾವುದೆಂಬುದು ಇಲ್ಲಿ ಮುಖ್ಯವೇ ಅಲ್ಲ.ಕನ್ನಡದಲ್ಲಿ ಎರಡು ಭಿನ್ನ ಕಾಲಘಟ್ಟದಲ್ಲಿ ಎರಡು ಭಿನ್ನ ರೀತಿಯ ಚಲನಚಿತ್ರಗಳು ಈತನ ಬದುಕನ್ನು ಇಟ್ಟುಕೊಂಡು ನಿರ್ಮಾಣವಾಗಿರುವುದೇ ಇದಕ್ಕೆ ಸಾಕ್ಷಿ.

ಕನ್ನಡದಲ್ಲಿ ಬಹು ಹಿಂದೆಯೇ ಸಂತ ಕಬೀರ್ ಬದುಕನ್ನು ಜನರಿಗೆ ವಿವರಿಸುವ ಒಂದು ನಾಟಕವೂ ಇತ್ತು. ಇದನ್ನು 1921ರಲ್ಲಿ ಬೆಳ್ಳಾವೆ ನರಹರಿಶಾಸ್ತ್ರಿಗಳು ರಚಿಸಿದ್ದರು.ಇದನ್ನು ಗುಬ್ಬಿ ವೀರಣ್ಣ ಅವರ ಕಂಪೆನಿ ಪ್ರಯೋಗಕ್ಕೆ ತಂದು ಜನಪ್ರಿಯಗೊಳಿಸಿತ್ತು. ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳು ಮೂರೂ ಮೇಳೈಸಿರುವ ಸಂತ ಕಬೀರನ ಬದುಕು ಒಂದರ್ಥದಲ್ಲಿ ಸಾಹಿತ್ಯ ಕೃತಿಯೊಂದು ಒಳಗೊಂಡಿರಬೇಕಾದ ಎಲ್ಲಾ ರಸಗಳಿಗೂ ಅವಕಾಶ ಒದಗಿಸಿಕೊಡುತ್ತದೆ.

ಬೆಳ್ಳಾವೆ ನರಹರಿಶಾಸ್ತ್ರಿಗಳು ಕಬೀರನ ಜನಪ್ರಿಯ ವ್ಯಕ್ತಿತ್ವದಿಂದ ಆಚೆಗೆ ಹೋಗಿ ಅವನನ್ನು ವಿವರಿಸಲು ಪ್ರಯತ್ನಿಸುವುದು ಈ ನಾಟಕದ ವಿಶೇಷ. ಗುಬ್ಬಿ ವೀರಣ್ಣನವರ ತಂಡ ಇದನ್ನು ಜನರ ಬಳಿಗೆ ಕೊಂಡೊಯ್ದು ಯಶಸ್ವಿಯಾದುದರ ಹಿಂದೆಯೂ ಈ ಹೊಸ ಬಗೆಯ ಅರ್ಥೈಸುವಿಕೆ ಹೆಚ್ಚು ಮುಖ್ಯ ಪಾತ್ರವಹಿಸಿದೆ ಎನಿಸುತ್ತದೆ.

ಕಬೀರನ ಕುರಿತಂತೆ ಇರುವ ಎಲ್ಲಾ ಜನಪ್ರಿಯ ಕಥೆಗಳನ್ನು ಇಟ್ಟುಕೊಂಡೇ ಅವನ ಜ್ಞಾನದ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ಈ ನಾಟಕವನ್ನು ರಚಿಸಲಾಗಿದೆ. ಸಹಜವಾಗಿಯೇ ರಂಗ ಪ್ರಯೋಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿರುವುದರಿಂದ ಇದರಲ್ಲಿ ಕೆಲ ಮಟ್ಟಿಗೆ ನಾಟಕೀಯ ಅಂಶಗಳಿವೆ. ಈ ಪುಸ್ತಕ 1933ರಲ್ಲಿ ಮರು ಮುದ್ರಣಗೊಂಡಿತ್ತು.ಅದರ ಎಲೆಕ್ಟ್ರಾನಿಕ್ ಪ್ರತಿಯೊಂದು ಈಗ ಆರ್ಕೈವ್ ತಾಣದಲ್ಲಿ ಲಭ್ಯವಿದೆ. ಆಸಕ್ತರು ಇಲ್ಲಿರುವ ಕೊಂಡಿ ಬಳಿ ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು: http://bit.ly/kalidasa

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT