ADVERTISEMENT

ಮಾವಿನಹಣ್ಣಿನಿಂದ ಸೌಂದರ್ಯ

​ಪ್ರಜಾವಾಣಿ ವಾರ್ತೆ
Published 11 ಮೇ 2017, 19:30 IST
Last Updated 11 ಮೇ 2017, 19:30 IST
ಮಾವಿನಹಣ್ಣಿನಿಂದ ಸೌಂದರ್ಯ
ಮಾವಿನಹಣ್ಣಿನಿಂದ ಸೌಂದರ್ಯ   

ಮಾವಿನ ಹಣ್ಣಿನಿಂದ ಚರ್ಮಕ್ಕೆ ಹಲವು ಉಪಯೋಗಗಳು ಇವೆ. ಬಿಸಿಲಿಗೆ ಕಪ್ಪಾದ ಚರ್ಮ, ನೀರಿನ ಅಂಶ ಕಳೆದುಕೊಂಡ ಒಣ ಚರ್ಮ, ಎಣ್ಣೆ ಅಂಶ, ಮೊಡವೆ ಕಲೆಗಳಿಂದ ಕೂಡಿದ ಚರ್ಮ... ಹೀಗೆ ಹಲವು ಸಮಸ್ಯೆಗಳಿಗೆ ಮಾವು ಮದ್ದು. ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾಗ ಮಾವಿನ ಫೇಸ್‌ಪ್ಯಾಕ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಎಣ್ಣೆ ಚರ್ಮಕ್ಕೆ ಮುಲ್ತಾನಿ ಮಿಟ್ಟಿ
ಎರಡು ಚಮಚ ಮುಲ್ತಾನಿ ಮಿಟ್ಟಿ, ಎರಡು ಚಮಚ ಮಾವಿನ ತಿರುಳು, ಒಂದು ಚಮಚ ಸಕ್ಕರೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 5 ನಿಮಿಷ ಚರ್ಮವನ್ನು ಮೃದುವಾಗಿ ಉಜ್ಜಿ. ಅರ್ಧಗಂಟೆ ಬಿಟ್ಟು  ಬಿಸಿನೀರಿನಲ್ಲಿ ಮುಖ ತೊಳೆಯಿರಿ.

ಇದು ಚರ್ಮದ ಹೆಚ್ಚುವರಿ ಎಣ್ಣೆ ಅಂಶವನ್ನು ತೆಗೆದು, ಚರ್ಮವನ್ನು ತಾಜಾಗೊಳಿಸುತ್ತದೆ. ಮಾವಿನ ಹಣ್ಣಿನ ಪೋಷಕಾಂಶಗಳಿಂದ ಚರ್ಮ ಪೋಷಣೆಯಾಗಿ ಕಾಂತಿಯುತವಾಗುತ್ತದೆ.

ADVERTISEMENT

ಒಣ ಚರ್ಮಕ್ಕೆ ಮೊಸರು
ಒಂದು ಬಟ್ಟಲು ಮೊಸರು, ಒಂದು ಇಡಿ ಮಾವಿನಹಣ್ಣಿನ ತಿರುಳು, ಮೂರು ಚಮಚ ಬೆಣ್ಣೆಯನ್ನು ಮಿಶ್ರಣ ಮಾಡಿಕೊಂಡು ಪೂರ್ತಿ ದೇಹಕ್ಕೆ ಹಚ್ಚಿಕೊಳ್ಳಬೇಕು. ಹತ್ತು ನಿಮಿಷ ನೆನೆಯಿರಿ. ಮುಖಕ್ಕೆ ಹಚ್ಚುವಾಗ ಈ ಮಿಶ್ರಣಕ್ಕೆ ಒಂದು ಚಮಚ ಕಡಲೆಹಿಟ್ಟು ಸೇರಿಸಿಕೊಳ್ಳಿ.

ಮಸಾಜ್‌ ಮಾಡಲು ಗುಲಾಬಿ ಜಲವನ್ನು (ರೋಜ್‌ ವಾಟರ್) ಬಳಸಬಹುದು.ಮಾವಿನ ತಿರುಳಿನೊಂದಿಗೆ ಕಡಲೆಹಿಟ್ಟು, ಅರಿಶಿಣ, ಹಾಲು, ಓಟ್ಸ್‌, ಬಾದಾಮಿಯನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಬಹುದು. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.