ADVERTISEMENT

ಸಂಪರ್ಕ ಕ್ಷೇತ್ರದ ಮೈಲಿಗಲ್ಲು ನೋಕಿಯಾ

ಬಾಲಚಂದ್ರ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ಸಂಪರ್ಕ ಕ್ಷೇತ್ರದ ಮೈಲಿಗಲ್ಲು  ನೋಕಿಯಾ
ಸಂಪರ್ಕ ಕ್ಷೇತ್ರದ ಮೈಲಿಗಲ್ಲು ನೋಕಿಯಾ   
ನೋಕಿಯಾ 5800 (2008) 
ನೋಕಿಯಾ 5800 ವ್ಯವಸ್ಥಿತ ಟಚ್‌ಸ್ಕ್ರೀನ್‌ ಸೌಲಭ್ಯ ಹೊಂದಿದ್ದ ಫೋನ್‌  ಆಗಿತ್ತು. ‘ಸಿಂಬಿಯನ್‌’ ಕಾರ್ಯಾಚರಣಾ ವ್ಯವಸ್ಥೆ ಹೊಂದಿದ್ದ 5ನೇ ಆವೃತ್ತಿಯ ಫೋನ್‌ ಇದಾಗಿತ್ತು. ‘ಕ್ರಿಸ್ಟೋಫರ್‌ ನೋಲನ್‌’ ಡಾರ್ಕ್‌ ನೈಟ್‌ ಸಿನಿಮಾದಲ್ಲಿ ಇದನ್ನು ಬಳಸುವ ಮೂಲಕ ಹೆಚ್ಚು ಪ್ರಸಿದ್ಧಿ ಪಡೆಯಿತು.
 
**
ನೋಕಿಯಾ ಎನ್‌ –ಗೇಜ್‌ (2002)
ಫೋನಿನಲ್ಲಿ ಸಂಭಾಷಣೆ ವೇಳೆ ಹಿಡಿದಿಡಲು ಅವಕಾಶವಿತ್ತು. ಹೀಗಾಗಿಯೇ ‘ಟಾಕೋ ಫೋನ್‌’ ಎಂಬ ಹೆಸರಿನಿಂದ ಖ್ಯಾತಿ ಪಡೆದುಕೊಂಡಿತು. ಗೇಮಿಂಗ್‌ ಉಪಕರಣ ಹೊಂದಿದ್ದರಿಂದ  ಗೇಮ್‌ಬಾಯ್‌ ಬಳಕೆದಾರರನ್ನು ಆಕರ್ಷಿಸುವಲ್ಲಿ
ಯಶಸ್ವಿಯಾಯಿತು.
 
**
ನೋಕಿಯಾ 8110 ( 1996)
‘ಮ್ಯಾಟ್ರಿಕ್ಸ್‌’ ಸಿನಿಮಾದಲ್ಲಿ ಕೆನಡಿಯನ್‌ ನಟ ಕೀಯಾನು ರೀವಸ್‌ ಬಳಸುವ ಮೂಲಕ ‘ಬನಾನಾ ಫೋನ್‌ ’ ಎಂದೇ ಖ್ಯಾತಿ ಪಡೆಯಿತು. ಆಗಿನ ಕಾಲಕ್ಕೆ ಭಿನ್ನ ವಿನ್ಯಾಸದಿಂದ ಆಕರ್ಷಣೆ ಸೃಷ್ಟಿಸಿತ್ತು.
 
**
ನೋಕಿಯಾ 1100  (2003)
ನೋಕಿಯಾ ಮೊಬೈಲ್‌ ಸರಣಿಯಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಖ್ಯಾತಿ ಈ ಮೊಬೈಲ್‌ನದ್ದು. 2011ರಲ್ಲಿ ನೋಕಿಯಾ ತಿಳಿಸಿದಂತೆ, ಜಗತ್ತಿನದ್ಯಾಂತ ಈ ಮೊಬೈಲ್‌ನ್ನು 25 ಕೋಟಿ ಮಂದಿ ಬಳಸಿದ್ದರು. ಇದಲ್ಲದೇ ಬೇರೆಯದ್ದೇ ಕಾರಣಗಳಿಂದ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿದೆ.
 
**
ನೋಕಿಯಾ 5100 ( 1998)
2002ರಲ್ಲಿ ಬಿಡುಗಡೆಯಾಗಿ 2003ರಲ್ಲಿ ಮತ್ತೊಮ್ಮೆ ಮಾರುಕಟ್ಟೆಗೆ ಪ್ರವೇಶಿಸಿತು. ಸ್ಟಿರಿಯೋ ಎಫ್‌ಎಂ ರೇಡಿಯೋ ಹಾಗೂ ಜಿಎಸ್‌ಎಂ ತರಾಂಗತಾಂತರಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿತ್ತು. ಈ ಮೊಬೈಲ್‌ನಲ್ಲಿ ಮೊದಲ ಬಾರಿಗೆ ‘ಹಾವಿನ’ ಆಟವನ್ನು ಪರಿಚಯಿಸಲಾಗಿತ್ತು.
**
ನೋಕಿಯಾ ಎನ್‌95 (2007)
ನೋಕಿಯಾ ಸರಣಿಯಲ್ಲಿ ಸಂಚಲನ ಸೃಷ್ಟಿಸಿದ ಸ್ಮಾರ್ಟ್‌ಫೋನ್‌.  ಮಾರುಕಟ್ಟೆಗೆ ಬಿಡುಗಡೆಯಾದ ವೇಳೆ ವಿಶ್ವದ ಪ್ರಬಲ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಯೂ ಇದಕ್ಕಿತ್ತು. ಅಲ್ಲದೇ 5ಎಂಪಿ ಕ್ಯಾಮೆರಾ ಈ ಸೌಲಭ್ಯ ಇದರಲ್ಲಿತ್ತು.
 
**
ನೋಕಿಯಾ ಫ್ಯೂರ್‌ ವ್ಯೂವ್‌ (2012)
40 ಎಂಪಿ ಫ್ಯೂರ್‌ವ್ಯೂವ್‌ ಕ್ಯಾಮೆರಾ ಹೊಂದಿದ್ದ ಸಿಂಬಿಯನ್‌’ ಕಾರ್ಯಾಚರಣಾ ವ್ಯವಸ್ಥೆ ಹೊಂದಿದ್ದ ಕೊನೆಯ ಫೋನ್‌ ಇದಾಗಿತ್ತು. ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ಕ್ರಾಂತಿ ಸೃಷ್ಟಿಸಿದ್ದು ಇದರ ವಿಶೇಷತೆ.
(ಸಂಗ್ರಹ)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.