ADVERTISEMENT

ಸಂವಹನಕ್ಕೆ ಸಾಕು 45 ನಿಮಿಷ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ಸಂವಹನಕ್ಕೆ ಸಾಕು 45 ನಿಮಿಷ
ಸಂವಹನಕ್ಕೆ ಸಾಕು 45 ನಿಮಿಷ   

ಇದು ಕೇವಲ ಮುಕ್ಕಾಲು ಗಂಟೆಯಲ್ಲಿ ಕಲಿಯಬಹುದಾದ ವಿದ್ಯೆ. ಹೌದು ಈ ಕೋರ್ಸ್ ರೂಪಿಸಿರುವ ಕ್ಯಾಟಲಿಸ್ಟ್‌ಎಕ್ಸ್ ಎಂಬ ಸರ್ಕಾರೇತರ ಸಂಸ್ಥೆಯ ಭರವಸೆಯಿದು. ಇದಾವ ವಿದ್ಯೆ ಎಂಬುದು ನಿಮ್ಮ ಪ್ರಶ್ನೆಯೇ? ಇದು ಸಂವಹನ ಕಲೆಗೆ ಸಂಬಂಧಿಸಿದ ಕೋರ್ಸ್.

ನಲವತ್ತೈದು ನಿಮಿಷಗಳಲ್ಲಿ ಸಂವಹನ ಕಲೆಯನ್ನು ಕಲಿಸುವುದು ನಿಜಕ್ಕೂ ಸಾಧ್ಯವೇ ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ಆದರೆ ಸಂವಹನವೆಂದರೆ ಏನು ಮತ್ತು ಅದೇಕೆ ಅಗತ್ಯ ಎಂಬುದನ್ನು ಕಲಿಯುವುದಕ್ಕೆ ಕೆಲವೇ ಕ್ಷಣಗಳು ಸಾಕು. ಅದರ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇಡೀ ಜೀವಮಾನವೇ ಬೇಕಾಗುತ್ತದೆ.

ಈ ಕೋರ್ಸ್‌ನ ಉದ್ದೇಶ ಸಂವಹನದ ಅಗತ್ಯವನ್ನು ತಿಳಿಸುವುದು ಮತ್ತು ನಿತ್ಯದ ಬದುಕಿನಲ್ಲಿ ಅದನ್ನು ಪ್ರಾಯೋಗಿಕವಾಗಿ ಅಳವಡಿಸುವುದು ಹೇಗೆ ಎಂದು ಹೇಳಿಕೊಡುವುದು. ಮಾತುಕತೆಯೊಂದು ಬಿಸಿಯೇರಿದ ಚರ್ಚೆಯಾಗುವ ಬದಲಿಗೆ ಅರ್ಥಪೂರ್ಣ ಸಂವಾದವಾಗಿಸುವುದು ಹೇಗೆ ಎಂದು ಕಲಿತರೆ ನಾವು ಅನೇಕ ವಿಷಯಗಳಲ್ಲಿ ಯಶಸ್ವಿಯಾದಂತೆ.

ಬಿರುಕುಗಳನ್ನು ಮುಚ್ಚುವ ಮೂಲಕ ಜಗತ್ತನ್ನು ಹೆಚ್ಚು ಸಹನೀಯವಾಗಿಸುವ ಗುರಿಯನ್ನಿಟ್ಟುಕೊಂಡಿರುವ ಈ ಕೋರ್ಸ್ ನಿಮ್ಮಳಗೊಂದು ಸಣ್ಣ ಬದಲಾವಣೆಯನ್ನು ತರುವುದಂತೂ ಖಚಿತ ಎಂದು ಕೋರ್ಸ್ ರೂಪಿಸಿದವರು ಅಭಿಪ್ರಾಯಪಡುತ್ತಾರೆ. ನಿಮ್ಮದೇ ವೇಗದಲ್ಲಿ ಕಲಿಯಬಹುದಾದ ಈ ಕೋರ್ಸ್‌ಗೆ ಸೇರುವುದಕ್ಕೆ ಇಲ್ಲಿರುವ ಕೊಂಡಿಯನ್ನು ಬಳಸಿ. ಅಂದ ಹಾಗೆ ಇದು ಉಚಿತ ಕೋರ್ಸ್: http://bit.ly/2l7oOsH

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.