ADVERTISEMENT

ಸಾಹಿತ್ಯದ ಜತೆಗೆ ಮಾಹಿತಿ

ಕನ್ನಡ ಆ್ಯಪ್‌ಲೋಕ

ಮಂಜುನಾಥ ರಾಠೋಡ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ಸಾಹಿತ್ಯದ ಜತೆಗೆ ಮಾಹಿತಿ
ಸಾಹಿತ್ಯದ ಜತೆಗೆ ಮಾಹಿತಿ   

ಗೂಗಲ್ ಪ್ಲೆಸ್ಟೋರ್‌ನಲ್ಲಿ ದೊರಕುವ ‘ಕನ್ನಡ ಕವಿತೆಗಳು’ (kannada kavithegalu) ಸಾಹಿತ್ಯದ ಜತೆಗೆ ಮಾಹಿತಿಯನ್ನೂ ಬಳಕೆದಾರರಿಗೆ ನೀಡುತ್ತಿರುವ ಕನ್ನಡ ಆ್ಯಪ್.

ಹೊಸ ಕವಿತೆಗಳು, ನಗೆಹನಿ, ಸುಭಾಷಿತ, ಸಣ್ಣಕತೆ, ವಚನಗಳು, ಸುದ್ದಿ, ನಾಡಿನ ಪ್ರಮುಖ ವ್ಯಕ್ತಿಗಳ ಬಗ್ಗೆ ಮಾಹಿತಿ ಎಲ್ಲವನ್ನೂ ಒಂದೇ ಆ್ಯಪ್‌ನಲ್ಲಿ ಬಳಕೆದಾರರಿಗೆ ಒದಗಿಸಿದೆ ‘ಕನ್ನಡ ಕವಿತೆಗಳು’ ಆ್ಯಪ್.

ಪ್ರಖ್ಯಾತ ಕವಿಗಳ ಕವನಗಳ ಜತೆಗೆ, ಹೊಸ ಕವಿಗಳ ಕವಿತೆಗಳೂ ಇಲ್ಲಿ ಓದಲು ಲಭ್ಯ. ಅಂತರ್ಜಾಲ ಓದಿಗೆ ಪೂರಕವಾಗುವಂತಹ ಸಣ್ಣಕತೆಗಳು ಆ್ಯಪ್‌ನ ಪ್ರಮುಖ ಅಂಶ. ಆಧುನಿಕ ಶೈಲಿಯ ಹೊಸತನದ ಸಣ್ಣ ಕತೆಗಳು ಓದಿಸಿಕೊಂಡು ಹೋಗುತ್ತವೆ.

ADVERTISEMENT

ಪ್ರಮುಖ ದಿನಪತ್ರಿಕೆಗಳು ಸೇರಿದಂತೆ ಪ್ರಮುಖ ಧಾರ್ಮಿಕ ಮಹಾಪುರುಷರ, ಧರ್ಮಗ್ರಂಥಗಳ ಸು–ಮಾತುಗಳು ಸುಭಾಷಿತಗಳ ರೂಪದಲ್ಲಿ ಆ್ಯಪ್‌ನಲ್ಲಿ ಲಭ್ಯವಾಗುತ್ತವೆ. ಆ್ಯಪ್‌ನ ನಗೆಹನಿ ವಿಭಾಗದಲ್ಲಿ ಮಾಸಿದ ಜೋಕುಗಳನ್ನು ಪ್ರಕಟಿಸದೆ ಆರೋಗ್ಯಕರ ವ್ಯಂಗ್ಯ, ಪ್ರಚಲಿತ ವಿದ್ಯಮಾನದ ಬಗ್ಗೆ ಹೆಣೆದ ಜೋಕುಗಳಿಗೆ ಮಾತ್ರ ಸ್ಥಾನ ಒದಗಿಸಿರುವುದು ಹೆಚ್ಚುಗಾರಿಕೆ.

ಆ್ಯಪ್‌ನಲ್ಲಿ, ಬಸವಣ್ಣ ಅಕ್ಕಮಹಾದೇವಿ ಸೇರಿದಂತೆ ಹಲವು ಪ್ರಮುಖ ವಚನಕಾರರ ವಚನಗಳು ಓದಲು ಸಿಗುತ್ತವೆ.

ಆ್ಯಪ್‌ನಲ್ಲಿ ಬರೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ. ಬಳಕೆದಾರರು ತಮ್ಮ ಹೆಸರು ಮೊಬೈಲ್ ಸಂಖ್ಯೆ ಇ–ಮೇಲ್ ಐ.ಡಿ ವಿಳಾಸ ನಮೂದಿಸಿ ಕವನ, ಹಾಸ್ಯ, ಸಣ್ಣಕತೆಗಳನ್ನು ಬರೆದು ಪೋಸ್ಟ್‌ ಮಾಡಬಹುದಾಗಿದೆ. ಆ್ಯಪ್‌ನಲ್ಲಿ ದೊರಕುವ ಕವನ, ಜೋಕುಗಳು, ಕತೆ, ವಚನಗಳನ್ನು  ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸೌಲಭ್ಯ ಆ್ಯಪ್‌ನಲ್ಲಿದೆ.

ಆ್ಯಪ್‌ನ ಸುದ್ದಿ ಮತ್ತು ಸಾಧಕರ ವಿಭಾಗದಲ್ಲಿ ಮಾಹಿತಿಗಳು ಸಮಯಾನುಸಾರ ಅಪ್‌ಡೇಟ್‌ ಮಾಡಲಾಗಿಲ್ಲ. ಇದು ಆ್ಯಪ್‌ನಲ್ಲಿ ಕಾಣುವ  ಕೊರತೆ.
ಆ್ಯಪ್‌ ಬಳಸಲು ಸರಳವಾಗಿದೆ. ಈ ವರೆಗೆ 50 ಸಾವಿರ ಡೌನ್‌ಲೋಡ್‌ಗಳನ್ನು ಕಂಡಿರುವ ಆ್ಯಪ್‌ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು  ಬಳಕೆದಾರರಿಂದ ವ್ಯಕ್ತವಾಗಿವೆ.

ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಾಗಿ ಹಾಗೂ ಮಾಹಿತಿಗಳನ್ನು ಅಪ್‌ಡೇಟ್ ಮಾಡುವ ಬಗ್ಗೆ ಆ್ಯಪ್ ಅಭಿವೃದ್ಧಿ ತಂಡ ಎಂಎಂಎಫ್ (ಮೆನಿ ಮೋರ್ ಫೀಚರ್ಸ್‌) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.