ADVERTISEMENT

ಸೆಲ್ಫಿ ಹಿಂದೇನಿದೆ?

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2017, 19:30 IST
Last Updated 16 ಆಗಸ್ಟ್ 2017, 19:30 IST
ಸೆಲ್ಫಿ
ಸೆಲ್ಫಿ   

ಸೆಲ್ಫಿ ದಾಖಲೆ
1839ರಲ್ಲೇ ಮೊದಲ ಸೆಲ್ಫಿ ದಾಖಲೆಯಾಗಿತ್ತು. ಫಿಲಡೆಲ್ಫಿಯಾದ ಕೆಮಿಸ್ಟ್ ಹಾಗೂ ಹವ್ಯಾಸಿ ಛಾಯಾಗ್ರಾಹಕ ರಾಬರ್ಟ್‌ ಕಾರ್ನೆಲಿಯಸ್ ಸೆಲ್ಫ್ ಪೋಟ್ರೇಟ್ ಅನ್ನು ಮೊದಲ ಬಾರಿಗೆ ತೆಗೆದುಕೊಂಡಿದ್ದು. ಇದೇ ಜಗತ್ತಿನ ಮೊದಲ ಸೆಲ್ಫಿಯಾಯಿತು. ಲೆನ್ಸ್‌ ಮುಚ್ಚಳ ತೆಗೆದು ಫ್ರೇಮ್‌ಗೆ ಬರುವಂತೆ ಓಡಿ ಹೋಗಿ ನಿಂತು ಈ ಫೋಟೊ ಕ್ಲಿಕ್ಕಿಸಿಕೊಂಡಿದ್ದು ವಿಶೇಷ.

ಕನ್ನಡಿ ಎದುರಿನ ಬಿಂಬ
1900ರಲ್ಲಿ ಮಹಿಳೆಯೊಬ್ಬಳು ಕನ್ನಡಿ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ವಿಧಾನ ಆಗ ಅತ್ಯಂತ ಜನಪ್ರಿಯವಾಯಿತು. ಕೊಡಾಕ್ ಬ್ರೌನಿ ಬಾಕ್ಸ್‌ ಕ್ಯಾಮೆರಾದಲ್ಲಿ ಈಕೆ ಸೆಲ್ಫಿಯನ್ನು ಹೀಗೆ ತೆಗೆದುಕೊಂಡಿದ್ದು...

ಹರೆಯದ ಸೆಲ್ಫಿ
1914ರಲ್ಲಿ ಡಚ್‌ ಬಾಲಕಿಯೊಬ್ಬಳು ತನ್ನ ಗೆಳೆಯನಿಗೆ ನೀಡುವ ಸಲುವಾಗಿ ಕನ್ನಡಿ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡಿದ್ದು ಹೀಗೆ. ಹದಿಮೂರರ ಆ ಹುಡುಗಿ, ‘ಈ ಚಿತ್ರವನ್ನು ನಾನೇ ಕನ್ನಡಿ ಮೂಲಕ ತೆಗೆದುಕೊಂಡಿದ್ದು, ಚಿತ್ರ ತೆಗೆಯಲು ತುಂಬಾ ಕಷ್ಟವಾಯಿತು,ಕೈಗಳು ನಡುಗುತ್ತಿದ್ದವು’ ಎಂದೂ ಕಳುಹಿಸಿದವರಿಗೆ ಬರೆದುಕೊಂಡಿದ್ದಾಳೆ. ಈಗಿನ ಪ್ರಸಿದ್ಧ ‘ಸ್ಪಾರೊ ಫೇಸ್ ಸೆಲ್ಫಿ’ ಶೈಲಿ ಇದು.

ADVERTISEMENT

ಗ್ರೂಫಿ ಕೂಡ ಇತ್ತು
1920ರಲ್ಲಿ ಬೈರಾನ್ ಫೋಟೊಗ್ರಫಿಕ್ಸ್‌ ಸ್ಟುಡಿಯೊದ ಜೇಮ್ಸ್ ಬೈರಾನ್ ಕ್ಲೇಟನ್ ಹಾಗೂ ನೌಕರರು ಸುಮ್ಮನೆ ಹೀಗೆ ಗ್ರೂಪ್ ಸೆಲ್ಫಿಗೆ ಮುಖವೊಡ್ಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.