ADVERTISEMENT

ಸೋನಂ, ನೇಹಾ ಉಂಗುರದ ಗುಟ್ಟು

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಸೋನಂ ಎಡಗೈಯಲ್ಲಿ ನಿಶ್ಚಿತಾರ್ಥದ ರಿಂಗ್‌
ಸೋನಂ ಎಡಗೈಯಲ್ಲಿ ನಿಶ್ಚಿತಾರ್ಥದ ರಿಂಗ್‌   

ಬಾಲಿವುಡ್‌ ನಟಿ ಸೋನಂ ಕಪೂರ್‌ ಅವರು ಮೇ 8ರಂದು ತಮ್ಮ ಬಹುಕಾಲದ ಗೆಳೆಯ ಆನಂದ್‌ ಅಹುಜಾ ಅವರ ಕೈಹಿಡಿದಿದ್ದಾರೆ. ಮದುವೆ ಬಳಿಕ ಕಾನ್ಸ್‌ ಚಿತ್ರೋತ್ಸವದ ರೆಡ್‌ ಕಾರ್ಪೆಟ್‌ನಲ್ಲಿ ಕೆನೆ ಬಣ್ಣದ ಲೆಹೆಂಗಾದಲ್ಲಿ ಸಾಂಪ್ರದಾಯಿಕ ಬೆಡಗಿಯಾಗಿ ಹೆಜ್ಜೆ ಹಾಕಿದ್ದ ಸೋನಂ ಕೈಗಳಲ್ಲಿ ಮದುವೆಯ ಮೆಹಂದಿ ನಳನಳಿಸುತ್ತಿತ್ತು. ಅದೇ ಸಮಯದಲ್ಲಿ ಅವರು ತೊಟ್ಟಿದ್ದ ನಿಶ್ಚಿತಾರ್ಥದ ಉಂಗುರ ಕೂಡ ಸುದ್ದಿ ಮಾಡಿತ್ತು.

ಆನಂದ್ ಅಹುಜಾ ಅವರು ಸೋನಂ ಕಪೂರ್ ಗೆ ತೊಡಿಸಿದ್ದ ಉಂಗುರದ ಬೆಲೆ ಬರೋಬ್ಬರಿ ₹ 90 ಲಕ್ಷ. ಇದಲ್ಲದೇ ಸೋನಂ ಮಂಗಳಸೂತ್ರವನ್ನೂ ವಿಶೇಷವಾಗಿ ವಿನ್ಯಾಸ ಮಾಡಿದ್ದು, ಇದರಲ್ಲಿ ಸೋನಂ ಹಾಗೂ ಆನಂದ್‌ ಅಹುಜಾ ಅವರ ಅದೃಷ್ಟದ ಚಿಹ್ನೆಗಳ ಸಣ್ಣ ಸಣ್ಣ ವಿನ್ಯಾಸಗಳಿವೆ.

ಈಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮತ್ತೊಂದು ಜೋಡಿ ನಟಿ ನೇಹಾ ದೂಫಿಯಾ ಹಾಗೂ ನಟ ಅಂಗದ್‌ ಬೇಡಿ. ನೇಹಾ ದೂಫಿಯಾ ಬೆರಳಲ್ಲಿರುವ ನಿಶ್ಚಿತಾರ್ಥದ ಉಂಗುರ ಅಂಗದ್‌ ಕುಟುಂಬದ ಪರಂಪರೆಯ ಬಳುವಳಿ. ಆ ಉಂಗುರ ತೊಟ್ಟ ಮೂರನೇ ತಲೆಮಾರು ನೇಹಾ ದೂಫಿಯಾ. ‘ಇದು ನಮ್ಮ ಕುಟುಂಬದ ಪರಂಪರೆ. ಅಂಗದ್‌ ತಂದೆ 40 ವರ್ಷಗಳ ಕೆಳಗೆ ಇದೇ ಉಂಗುರವನ್ನು ತೊಡಿಸಿದ್ದರು. ಈಗ ಹೊಸ ಜೋಡಿಗೆ ವರ್ಗಾವಣೆಯಾಗಿದೆ. ಈ ಉಂಗುರ ಭಾವನೆಗಳ ಸೂಚಕ’ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.