ADVERTISEMENT

‘ಸ್ಲಿಮ್ ಮಾದ’ ಬಾಡಿ ಬಿಲ್ಡ್‌ ಮಾಡಿಕೊಂಡಿದ್ದು...

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST
ಯೋಗಿ
ಯೋಗಿ   

ಚಂದನವನದ ಸ್ಲಿಮ್ ಹೀರೊ ಯೋಗಿ, ದುನಿಯಾ ಸಿನಿಮಾದ ಲೂಸ್ ಮಾದನ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದವರು. ಒಂದು ಅವರ ಅಭಿನಯವಾದರೆ ಮತ್ತೊಂದು ಅವರ ಮೈಕಟ್ಟು ಇದಕ್ಕೆ ಕಾರಣವಾಗಿತ್ತು. ‘ನಂದ ಲವ್ಸ್‌ ನಂದಿತಾ’ ಸಿನಿಮಾದ ‘ಜಿಂಕೆ ಮರಿ ನಾ, ನೀ ಜಿಂಕೆ ಮರಿನಾ’ ಹಾಡಿನ ನೃತ್ಯದ ಮೂಲಕ ಮತ್ತಷ್ಟು ಸುದ್ದಿಯಾದರು. ಎಷ್ಟೇ ಸುದ್ದಿಯಾದರೂ ಅದರ ಹಿಂದೆ ‘ಯೋಗಿಯಷ್ಟು ಸಣ್ಣ’ ಎಂಬ ಮಾತೂ ತಳಕು ಹಾಕಿಕೊಳ್ಳುತ್ತಿತ್ತು.

ಹಲವು ಗೆಳೆಯರು ‘ದಪ್ಪ ಆಗು’ ಎಂದು ಒತ್ತಾಯವನ್ನೂ ಮಾಡಿದ್ದರಂತೆ. ಈ ಬಗ್ಗೆ ಮಾತನಾಡುವ ಯೋಗಿ ‘ತುಂಬಾ ಜನ ಜಿಮ್‌ಗೆ ಹೋಗಲು ಸಲಹೆ ನೀಡುತ್ತಿದ್ದರು. ಯಾವನ್ ಅದೆಲ್ಲಾ ಮಾಡ್ತಾನೆ ಎನಿಸೋದು, ಆದರೂ ಜಿಮ್‌ಗೆ ಹೋಗಲಾರಂಭಿಸಿ ಮೊದಲು ಒಂದು ವಾರ ಹೊಂದಿಕೊಳ್ಳಲು ತುಂಬಾ ಕಷ್ಟವಾಯ್ತು’ ಎನ್ನುತ್ತಾರೆ.

ಸಿನಿಮಾ ಕ್ಷೇತ್ರಕ್ಕೆ ಬಂದ ಹೊಸತರಲ್ಲಿ 50 ಕೆ.ಜಿ. ಇದ್ದ ಯೋಗಿ ‘ಸಿದ್ಲಿಂಗು’ ಸಿನಿಮಾಕ್ಕಾಗಿ 10ಕೆ.ಜಿ. ತೂಕ ಹೆಚ್ಚಿಸಿಕೊಂಡರಂತೆ. ಈ ಬಗ್ಗೆ ಮಾತನಾಡುವ ಯೋಗಿ ‘ಸಿದ್ಲಿಂಗು’ ಸಿನಿಮಾದಲ್ಲಿ ಹಾಸ್ಯ, ರೊಮ್ಯಾನ್ಸ್‌ ಜೊತೆ ಸಾಹಸವೂ ಪ್ರಧಾನ ಅಂಶ. ಅದಕ್ಕಾಗಿ ತೂಕ ಹೆಚ್ಚಿಸಿಕೊಳ್ಳಬೇಕಾಯಿತು’ ಎನ್ನುತ್ತಾರೆ. ಇದಾದ ನಂತರ ‘ಜಾನ್ ಜಾನಿ ಜನಾರ್ದನ್‌’ ಸಿನಿಮಾಕ್ಕಾಗಿ ಮತ್ತೆ 10ಕೆ.ಜಿ. ತೂಕ ಹೆಚ್ಚಿಸಿಕೊಂಡು 70 ಕೆಜಿಗೇರಿದರು.

ADVERTISEMENT

ದಪ್ಪಗಾಗಲು ನಿತ್ಯ ಡಯೆಟ್‌ನಲ್ಲಿ 11 ಮೊಟ್ಟೆಯ ಬಿಳಿ ಭಾಗ, ಒಂದು ಕೆ.ಜಿ. ಕೋಳಿ ಮಾಂಸ ಸೇವಿಸುತ್ತಿದ್ದರಂತೆ. ‘ನನಗೆ ಚಿಲ್ಲಿ ಚಿಕನ್ ಎಂದರೆ ಇಷ್ಟ. ಡಯಟ್‌ ಮಾಡುವ ಸಂದರ್ಭದಲ್ಲಿ ಕೋಳಿಗೆ ಯಾವುದೇ ಮಸಾಲೆ ಇಲ್ಲದೆ. ಖಾಲಿ ನೀರಿನಲ್ಲಿ ಬೇಯಿಸಿದ ಕೋಳಿ ಮಾಂಸವನ್ನು ತಿನ್ನಬೇಕು. ಇದು ತುಂಬಾ ಕಷ್ಟವಾಯ್ತು’ ಎನ್ನುತ್ತಾರೆ ಯೋಗಿ.

ಚರ್ಮದ ಆರೈಕೆ ಬಗ್ಗೆ ಕೇಳಿದರೆ ‘ದಿನ ಬೆಳಿಗ್ಗೆ ಎದ್ದು ಮುಖ ತೊಳೆಯುವುದು ಬಿಟ್ಟು ಬೇರೇನೂ ಮಾಡುವುದಿಲ್ಲ’ ಎನ್ನುತ್ತಾರೆ. ಇನ್ನೂ ಚಿತ್ರೀಕರಣ ಸಂದರ್ಭದಲ್ಲಿ ಹೆಚ್ಚು ದೂಳಿನಿಂದ ಕೂದಲು ಕೊಳೆಯಾದರೆ ಅಪರೂಪಕ್ಕೆ ಸ್ಪಾ ಮೊರೆ ಹೋಗುತ್ತಾರಂತೆ.

ಜಂಕ್‌ ಫುಡ್‌ ತಿನ್ನುವುದರಿಂದ ಯೋಗಿಗೆ ಯಾವುದೇ ಸಮಸ್ಯೆ ಇಲ್ಲವಂತೆ. ‘ನಾನು ಸಣ್ಣಗಿರುವುದರಿಂದ ದಪ್ಪವಾಗಿ ಬಿಡುವ ಆತಂಕವೇ ಇಲ್ಲ. ಹಾಗೇ ನನಗೆ ಏನೇ ತಿಂದರೂ ಚೆನ್ನಾಗಿ ಜೀರ್ಣವಾಗುತ್ತದೆ. ಎರಡು ಗಂಟೆಗೊಮ್ಮೆ ಏನಾದರೂ ತಿನ್ನಬಲ್ಲೆ’ ಎನ್ನುವ ಯೋಗಿ ಸಂಜೆ ಹೊತ್ತು ಪಿಜ್ಜಾ ತಿನ್ನುತ್ತಾರೆ!

*
* ಹುಟ್ಟಿದ್ದು: ಬೆಂಗಳೂರು
* ಜನ್ಮ ದಿನಾಂಕ: ಜುಲೈ 6, 1990
* ತೂಕ: 70 ಕೆ.ಜಿ
* ಎತ್ತರ: 6 ಅಡಿ
* ವೈಯಕ್ತಿಕ ತರಬೇತುದಾರ: ಬೀರೇಶ್‌,  ಆ್ಯಪಲ್‌ ಫಿಟ್‌ನೆಸ್, ರಾಜರಾಜೇಶ್ವರಿ ನಗರ
* ಇಷ್ಟವಾದ ಆಹಾರ: ಚಿತ್ರಾನ್ನ, ಚಿಲ್ಲಿ ಚಿಕ್ಕನ್‌
* ಇಷ್ಟವಿಲ್ಲದ ಆಹಾರ: ಉಪ್ಪಿಟ್ಟು
* ಹವ್ಯಾಸ: ವಾಲಿಬಾಲ್‌,ಬ್ಯಾಡ್ಮಿಂಟನ್‌

ಡಾಯಟ್‌ ಚಾಟ್‌
* ಬೆಳ್ಳಗೆ : ಅನ್ನ, ಮೊಟ್ಟೆಯ ಬಿಳಿ ಭಾಗ
* ಮಧ್ಯಾಯಃ: ಅನ್ನ, ಬೇಯಿಸಿದ ತರಕಾರಿ
* ರಾತ್ರಿ : ಚಪಾತಿ, ಬೇಯಿಸಿದ ತರಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.