ADVERTISEMENT

ಹಾವೇ ನಮ್ಮ ಹೈಫ್ಯಾಷನ್ನು

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST
ಹಾವೇ ನಮ್ಮ ಹೈಫ್ಯಾಷನ್ನು
ಹಾವೇ ನಮ್ಮ ಹೈಫ್ಯಾಷನ್ನು   

ವಿಷ ಕಾರುವ ಸರ್ಪಗಳನ್ನು ಕಂಡರೆ ಬೆಚ್ಚಿಬೀಳದವರಾರು? ಆದರೆ ಈ ಭಯವನ್ನೇ ಬಂಡವಾಳ ಮಾಡಿಕೊಂಡವರೂ ಇದ್ದಾರೆ. ಅದು ಹೇಗೆ ಅಂತೀರಾ? ಫ್ಯಾಷನ್‌ ಮೂಲಕ.

ಹಾವಿಗೂ ಫ್ಯಾಷನ್‌ಗೂ ಎಲ್ಲಿಂದೆಲ್ಲಿಯ ನಂಟು ಎಂದು ನಿಮಗೂ ಅನ್ನಿಸಿರಬಹುದು. ಈ ಜಾಡನ್ನು ಹಿಡಿದಾಗ ಸಿಕ್ಕಿದ್ದೇ ‘ಡೇಂಜರಸ್ ಫ್ಯಾಷನ್‌’.

ಈ ವರ್ಗದಲ್ಲಿ ಹಾವಿನ ವಿನ್ಯಾಸಕ್ಕೇ ಆದ್ಯತೆ. ‘ಸ್ನೇಕ್ ಇನ್‌ಸ್ಪೈರ್ಡ್’ ವಸ್ತ್ರಗಳು ರ್‍ಯಾಂಪ್ ಮೇಲೆ ಕಾಣಿಸಿಕೊಂಡಿದ್ದೂ ಇದೇ ಹುರುಪಿನಲ್ಲಿ.

ADVERTISEMENT

ಹಾವು, ಧೈರ್ಯ, ಸೇಡಿನ ಸಂಕೇತ. ಹಾವಿನ ದೇಹದ ಬಳುಕು ಕಂಡರೆ ರೂಪದರ್ಶಿಗಳಿಗೂ ಹೊಟ್ಟೆಕಿಚ್ಚು. ಇದೇ ಅಂಶ ವಿನ್ಯಾಸಕರನ್ನು ಸೆಳೆದದ್ದು. ಅದಕ್ಕೇ ‘ಬೋಲ್ಡ್ ಅಂಡ್ ಬ್ಯೂಟಿಫುಲ್’ ಆಗಿ ಕಾಣಲು, ಕಾಣಿಸಲು ವಿನ್ಯಾಸಕರು ಹಾವುಗಳ ಹಿಂದೆ ಬಿದ್ದರು. ಶೀರ್, ಪೈಥಾನ್‌ನಂಥ ಹಲವು ಪ್ರಭೇದದ ಹಾವಿನ ಪೊರೆಗಳ ನೈಜ ವಿನ್ಯಾಸವೇ ಇವರಿಗೆ ಸ್ಫೂರ್ತಿಯಾಯಿತು. ಸೆಲೆಬ್ರಿಟಿಗಳಂತೂ ಹಾವಿನ ವಿನ್ಯಾಸವನ್ನೇ ನೆಚ್ಚಿ ಮಿಂಚಿದರು.

ಬರೀ ಬಟ್ಟೆ ಮಾತ್ರವಲ್ಲ, ಫ್ಯಾಷನ್‌ ಎಂದು ಏನೇನನ್ನು ಕರೆಯುತ್ತೇವೋ ಎಲ್ಲದರಲ್ಲೂ ಹಾವು ನುಸುಳಿತು. ಕಿರೀಟ, ಬಳೆ, ನೆಕ್ಲೇಸ್, ಕಿವಿಯೋಲೆ, ವಾಚು, ಬೆಲ್ಟ್‌, ಪರ್ಸ್‌, ಅಷ್ಟೇ ಏಕೆ ಚಪ್ಪಲಿ, ಶೂಗಳಲ್ಲೂ ಹಾವಿನ ವಿನ್ಯಾಸವೇ ಮೆಚ್ಚುಗೆ ಗಳಿಸಿದ್ದು. ಹಾವಿನ ಹಚ್ಚೆ ಹುಡುಗರಲ್ಲಿ ಹುಚ್ಚು ಹಿಡಿಸಿದ್ದನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ಮೇಕಪ್ ಕೂಡ ಅದೇ ಜಾಡು ಹಿಡಿಯಿತು.

ಕಳೆದ ವರ್ಷ ಗಾಲಾ ಫೆಸ್ಟ್‌ನಲ್ಲಿ ರೂಪದರ್ಶಿ ಕೆಂದಾಲ್‌ ಜೆನ್ನರ್ ಕೂಡ ಹಾವಿನ ವಿನ್ಯಾಸದ ಕಪ್ಪು ಬಟ್ಟೆ ತೊಟ್ಟು ನಾಗಿಣಿಯಂತೇ ಮಿಂಚಿದರಲ್ಲ, ಅದನ್ನು ಮರೆಯಲಾದೀತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.