ADVERTISEMENT

ಹೀಗೂ ಬಳಸಬಹುದು ಪ್ಲಾಸ್ಟಿಕ್‌ ಚೀಲ!

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 19:46 IST
Last Updated 2 ಸೆಪ್ಟೆಂಬರ್ 2015, 19:46 IST

ಫ್ಯಾಷನ್‌ ಲೋಕವೇ ಹೀಗೆ. ಏನು ಮಾಡಿದರೂ ಅದು ಫ್ಯಾಷನ್ನೇ. ಬಟ್ಟೆ ಹಾಕಲಿ, ಹಾಕದಿರಲಿ ಅಥವಾ ಹಾಕಿದರೂ ಹಾಕದಂತಿರಲಿ... ಒಟ್ಟಿನಲ್ಲಿ ಎಲ್ಲವೂ ಫ್ಯಾಷನ್ನೇ ಆಗಿಬಿಟ್ಟಿದೆ. ಇಂಥದ್ದೇ ಒಂದು ಫ್ಯಾಷನ್‌ ಲೋಕ ಈಗ ತೈವಾನ್‌ನಲ್ಲಿ ಗರಿಬಿಚ್ಚಿದೆ.

ನಮ್ಮಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ ನಿಷೇಧ ಮಾಡಬೇಕೆಂದು ಹೋರಾಟ ನಡೆಯುತ್ತಿರುವಾಗ ಅಲ್ಲಿ ಇದನ್ನೇ ಫ್ಯಾಷನ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಹಾಗೆಂದು ಅದರಿಂದ ಡ್ರೆಸ್‌ ತಯಾರಿಸುತ್ತಿದ್ದಾರೆ ಎಂದುಕೊಂಡರೆ ತಪ್ಪು. ಏಕೆಂದರೆ ಅಲ್ಲಿನ ಯುವಕ- ಯುವತಿಯರು ಅಂಗಡಿಗಳಲ್ಲಿ ಸಿಗುವ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನೇ ತೊಟ್ಟು ಫೋಟೊಗೆ ಪೋಸ್‌ ಕೊಡುತ್ತಿದ್ದಾರಂತೆ. ಬರೀ ಹೀಗಾದರೆ ಇದು ಇಷ್ಟು ದೊಡ್ಡ ವಿಷಯವಾಗುತ್ತಿರಲಿಲ್ಲ. ಒಳಗಡೆ ಕನಿಷ್ಠ ಬಟ್ಟೆಯನ್ನೂ ಧರಿಸದೇ ಬರೀ ಪ್ಲಾಸ್ಟಿಕ್‌ ಚೀಲವನ್ನಷ್ಟೇ ತೊಡುತ್ತಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ‘ಮರ್ಸಿಡಿಸ್‌ ಬೆಂಜ್‌ ಫ್ಯಾಷನ್‌ ವೀಕ್‌’ನಿಂದ ಆಕರ್ಷಿತರಾಗಿ ಈ ರೀತಿ ಮಾಡುತ್ತಿದ್ದಾರಂತೆ. ಅಂದಹಾಗೆ ಫ್ಯಾಷನ್‌ ವೀಕ್‌ನಲ್ಲಿ ರೂಪದರ್ಶಿಗಳು ಪ್ಲಾಸ್ಟಿಕ್‌ ಚೀಲಗಳನ್ನು ತಲೆಯ ಮೇಲೆ ಮಾತ್ರ ಧರಿಸಿದ್ದರು. ಸ್ವಲ್ಪ ಬದಲಾವಣೆ ಇರಲಿ ಎಂದೋ ಗೊತ್ತಿಲ್ಲ, ತೈವಾನಿಗರು ಮಾತ್ರ ಮೈತುಂಬಾ (ಪ್ಲಾಸ್ಟಿಕ್‌ ಚೀಲದ ಅಳತೆಯಷ್ಟು!) ಅದನ್ನೇ ತೊಡುತ್ತಿದ್ದಾರೆ ಎಂದು ಡೇಲಿಮೇಲ್‌ ಡಾಟ್‌ ಕಾಮ್‌ ವರದಿ ಮಾಡಿದೆ.  v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.