ADVERTISEMENT

‘ಗಲ್ಲಾ ಪೆಟ್ಟಿಗೆಯಷ್ಟೇ ಮುಖ್ಯವಲ್ಲ...’

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
‘ಗಲ್ಲಾ ಪೆಟ್ಟಿಗೆಯಷ್ಟೇ ಮುಖ್ಯವಲ್ಲ...’
‘ಗಲ್ಲಾ ಪೆಟ್ಟಿಗೆಯಷ್ಟೇ ಮುಖ್ಯವಲ್ಲ...’   

ನೀಲಿಕಣ್ಣಿನ ಚೆಲುವೆ, ಕಡಲತಡಿಯ ಬೆಡಗಿ ನಟಿ ಐಶ್ವರ್ಯಾ ರೈ ಬಚ್ಚನ್‌ ‘ನಾನು ಗಲ್ಲಾಪೆಟ್ಟಿಗೆ ತುಂಬಿಸುವ ಉದ್ದೇಶವಿರುವ ಚಿತ್ರಗಳಲ್ಲಷ್ಟೇ ನಟಿಸುವುದಿಲ್ಲ’ ಎಂದಿದ್ದಾರೆ. ಇತ್ತೀಚೆಗೆ ಐಶ್ವರ್ಯಾ ಅಭಿನಯದ ಸರಬ್ಜೀತ್‌ ಸಿಂಗ್‌ ಜೀವನ ಕಥೆಯನ್ನಾಧರಿಸಿದ ಚಿತ್ರ ಸರಬ್ಜೀತ್‌ ಬಿಡುಗಡೆಗೊಂಡಿತ್ತು. ಅಲ್ಲದೇ ಈ ಚಿತ್ರ ಪ್ರಪಂಚದಾದ್ಯಂತ ಚಿತ್ರ ಪ್ರೇಮಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

ನಾನು ನನ್ನ ವೃತ್ತಿಜೀವನದಲ್ಲಿ ಎಂದಿಗೂ ಗಲ್ಲಾಪೆಟ್ಟಿಗೆ ತುಂಬಬೇಕು ಎಂಬ ಕಾರಣಕ್ಕೆ ಚಿತ್ರಗಳಲ್ಲಿ ನಟಿಸಿಲ್ಲ. ಚಿತ್ರತಂಡವೂ ನನ್ನ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದೆ. ನಾನು ಚಿತ್ರತಂಡದ ನನ್ನಿಂದ ನಿರೀಕ್ಷಿಸಿದ್ದನ್ನು ಮಾಡಿದ್ದೇನೆ ಎಂದು ಮಾಧ್ಯಮ ವರದಿಗಾರಿಗೆ ತಿಳಿಸಿದ್ದಾರೆ ಐಶ್‌.

ಸರಬ್ಜೀತ್‌  ಸೂಕ್ಷ್ಮಕಥೆಯನ್ನು ಒಳಗೊಂಡ ಚಿತ್ರ.  ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿ ಅಲ್ಲಿಯೇ ಸಾವನ್ನಪ್ಪಿದ ಸರಬ್ಜೀತ್‌ ಸಿಂಗ್ ಜೀವನಕಥೆಯನ್ನು ಆಧರಿಸಿದೆ. ಐಶ್‌ ಈ ಚಿತ್ರದಲ್ಲಿ ಸರಬ್ಜೀತ್‌ ಸಹೋದರಿ ದಲ್ಬೀರ್ ಕೌರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಅವರು ಕೋರಿದ್ದಾರೆ.

ಇದರಿಂದಾಗಿ ಇನ್ನಷ್ಟು ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುವುದು. ಈ ಚಿತ್ರ ದೇಶದ ಪ್ರತಿ ಮೂಲೆಗೂ ತಲುಪಬೇಕು ಎಂಬುದು ನನ್ನ ಮನದ ಬಯಕೆ ಎಂದಿದ್ದಾರೆ ಐಶ್ವರ್ಯಾ. ಓಮಂಗ್ ಕುಮಾರ್ ನಿರ್ದೇಶನದ  ಈ ಚಿತ್ರ ಕೇವಲ ಪ್ರೇಕ್ಷಕರಿಂದ ಮಾತ್ರವಲ್ಲದೇ ಸರಬ್ಜೀತ್‌ ಕುಟುಂಬದವರು ಕೂಡ ಚಿತ್ರ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರವನ್ನು ಸರಬ್ಜೀತ್‌ ಸಿಂಗ್ ಅವರ ಜೀವನಕ್ಕೆ ಹತ್ತಿರವಾಗುವ ಹಾಗೇ ಚಿತ್ರವನ್ನು ನಿರ್ಮಿಸಿಬೇಕಾಗಿದ್ದು ನಮ್ಮ ಕರ್ತವ್ಯವಾಗಿತ್ತು. ಚಿತ್ರ ನೋಡಿ ಆ ಕುಟುಂಬ ಸಂತಸ ವ್ಯಕ್ತಪಡಿಸಿದೆ ಎಂದು ಐಶ್ವರ್ಯಾ ರೈ ಚಿತ್ರವನ್ನು ಕುರಿತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.