ADVERTISEMENT

ಆಫ್‌ಲೈನ್‍‍ ವೆಬ್‌ಪೇಜ್

ದಯಾನಂದ ಎಚ್‌.ಎಚ್‌.
Published 8 ನವೆಂಬರ್ 2017, 19:30 IST
Last Updated 8 ನವೆಂಬರ್ 2017, 19:30 IST

ಆನ್‌ಲೈನ್‌ನಲ್ಲಿದ್ದಾಗ ವೆಬ್‌ಸೈಟ್‌ನ ಪೇಜ್ ಒಂದನ್ನು ತೆರೆದು ಓದುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ವೆಬ್‌ಪೇಜ್‍‍ ಅನ್ನು ಮೊಬೈಲ್ ಬ್ರೌಸರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಆಫ್‌ಲೈನ್‌ನಲ್ಲಿ ಓದುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ.

ನಿಮ್ಮ ಮೊಬೈಲ್‌ನಲ್ಲಿ ಕ್ರೋಮ್ ಬ್ರೌಸರ್ ತೆರೆಯಿರಿ. ನೀವು ಓದಬಯಸುವ ವೆಬ್‌ಸೈಟ್‌ನ ಪೇಜ್‍ ಕ್ಲಿಕ್ ಮಾಡಿ. ಈಗ ಬ್ರೌಸರ್‌ನ ಬಲಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೆನು ಮೇಲೆ ಕ್ಲಿಕ್ಕಿಸಿ. ಇಲ್ಲಿ ಕಾಣುವ ಡೌನ್‌ಲೋಡ್ ಚಿಹ್ನೆಯ ಮೇಲೆ ಒತ್ತಿರಿ. ಈಗ ಪೇಜ್ ಡೌನ್‌ಲೋಡ್ ಆಗಿರುವ ಮಾಹಿತಿ ಕಾಣಿಸುತ್ತದೆ.

ಡೌನ್‌ಲೋಡ್ ಆಗಿರುವ ವೆಬ್‌ಪೇಜ್ ಬ್ರೌಸರ್‌ನಲ್ಲಿ ಆಫ್‌ಲೈನ್ ಆಗಿ ಸೇವ್ ಆಗಿರುತ್ತದೆ. ನೀವು ನೆಟ್‌ವರ್ಕ್ ಇಲ್ಲದ ಸ್ಥಳದಲ್ಲಿದ್ದರೆ ಅಥವಾ ಮೊಬೈಲ್ ಡೇಟಾ ಆಫ್ ಆಗಿದ್ದರೂ ಈ ವೆಬ್‌ಪೇಜ್ ಅನ್ನು ಓದಬಹುದು. ನಿಮ್ಮ ಮೊಬೈಲ್ ಆಫ್‌ಲೈನ್‌ನಲ್ಲಿದ್ದರೂ ಡೌನ್‌ಲೋಡ್ ಆಗಿರುವ ವೆಬ್‌ಪೇಜ್ ಓದಲು ನಿಮ್ಮ ಬ್ರೌಸರ್ ತೆರೆಯಿರಿ. ಇಲ್ಲಿ ಸೇವ್ ಆಗಿರುವ ವೆಬ್‌ಪೇಜ್‌ಗಳು ಕಾಣಿಸಿಕೊಳ್ಳುತ್ತವೆ. ನೀವು ಎಷ್ಟು ವೆಬ್‌ಪೇಜ್‌ಗಳನ್ನು ಸೇವ್ ಮಾಡಿರುತ್ತೀರೋ ಆ ಪೇಜ್‌ಗಳೆಲ್ಲವೂ ಇಲ್ಲಿ ಕಾಣುತ್ತವೆ. ನಿಮಗೆ ಬೇಕಾದ ವೆಬ್‌ ಪೇಜ್ ಅನ್ನು ಆರಿಸಿಕೊಂಡು ನೀವು ಓದಬಹುದು.

ADVERTISEMENT

ಆಫ್‌ಲೈನ್ ಆಗಿ ಸೇವ್ ಆಗಿರುವ ವೆಬ್‌ಪೇಜ್‌ನ ಅಡ್ರೆಸ್ ಬಾರ್‌ನ ಪಕ್ಕದಲ್ಲಿ Offline ಎಂದು ಕಾಣಿಸಿಕೊಳ್ಳುತ್ತದೆ. ಈ ಆಫ್‌ಲೈನ್ ಪೇಜ್ ನೀವು ಬ್ರೌಸರ್ ಹಿಸ್ಟರಿ ಕ್ಲಿಯರ್ ಮಾಡುವವರೆಗೂ ನಿಮ್ಮ ಬ್ರೌಸರ್‌ನಲ್ಲಿ ಸೇವ್ ಆಗಿರುತ್ತದೆ. ನಿಮಗೆ ಬೇಕಾದ ಲೇಖನಗಳಿರುವ ವೆಬ್‌ಪೇಜ್‌ಗಳನ್ನು ಹೀಗೆ ನೀವು ಆಫ್‌ಲೈನ್‌ಗೆ ಸೇವ್ ಮಾಡಿಕೊಂಡು ಆನ್‌ಲೈನ್ ಸಂಪರ್ಕ ಇಲ್ಲದ ಸಂದರ್ಭದಲ್ಲೂ ಓದಿಕೊಳ್ಳಬಹುದು. ನೀವೂ ಒಮ್ಮೆ ಆಫ್‌ಲೈನ್ ಪೇಜ್ ಪ್ರಯತ್ನಿಸಿ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.