ADVERTISEMENT

ಚಾರ್ಜ್ ಮಾಡುವ ಸೋಲಾರ್ ಚೇರ್

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST
ಚಾರ್ಜ್ ಮಾಡುವ ಸೋಲಾರ್ ಚೇರ್
ಚಾರ್ಜ್ ಮಾಡುವ ಸೋಲಾರ್ ಚೇರ್   

ಈಗ ತಂತ್ರಜ್ಞಾನವಿಲ್ಲದ ಜಾಗವೇ ಇಲ್ಲ. ಅದನ್ನು ಬಳಸಿಕೊಳ್ಳುವ ಸಾಧ್ಯತೆಗಳೂ ಕಡಿಮೆಯಿಲ್ಲ. ತೂಗುಯ್ಯಾಲೆ ಯಂತಿರುವ ಈ ಚೇರ್‌ ಕೂಡ ಅಂಥದ್ದೇ ಒಂದು ಸಾಧ್ಯತೆ.

‘ನೇಚರ್ ಆ್ಯಸ್‌ ಎ ಪ್ರಿನ್ಸಿಪಲ್’ ಎಂಬ ತತ್ವದ ಮೇಲೆ ಇದನ್ನು ರೂಪಿಸಲಾಗಿದೆ. ನಗರ ಕೇಂದ್ರಿತ ಹಾಗೂ ತಂತ್ರಜ್ಞಾನ ಪ್ರೇರೇಪಿತ ಬೀದಿ ಪೀಠೋಪಕರಣಗಳ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಈ ಸ್ಮಾರ್ಟ್‌ ಚೇರ್ ವಿನ್ಯಾಸಗೊಂಡಿದೆ.

ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಳ್ಳುವ ಸುಲಭ ಮಾರ್ಗೋಪಾಯವಾಗಿಯೂ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಬೆಂಚ್‌ಗೆ ಎರಡು ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಈ ಪ್ಯಾನೆಲ್‌ಗಳು 2x140Wp ಶಕ್ತಿ ಉತ್ಪಾದಿಸುತ್ತವೆ.

ADVERTISEMENT

ಇದರಿಂದ ಒಟ್ಟಿಗೆ ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಎರಡು ಇನ್‌ಬಿಲ್ಟ್ ಟ್ವಿನ್ ಸಾಕೆಟ್‌ಗಳು ಇವೆ. ಬಿಲ್ಟ್ ಇನ್ ರೂಟರ್ ವೈಫೈ ಅಕ್ಸೆಸ್ ನೀಡಲಾಗಿದೆ. ಆರಾಮಾಗಿ ಕೂತು ಚಾರ್ಜ್ ಮಾಡಿಕೊಳ್ಳಬಹುದು, ಜೊತೆಗೆ ಅಂತರಜಾಲ ಬಳಸಬಹುದು.

ಇವಿಷ್ಟೇ ಅಲ್ಲ, ಹವಾಮಾನದ ವರದಿಯನ್ನೂ ನೀಡುತ್ತದೆ ಈ ಚೇರ್. ಸಿಒ2 ಮೀಟರ್, ನಾಯ್ಸ್ ಲೆವಲ್ ಮೀಟರ್, ಏರ್ ಟೆಂಪರೇಚರ್ ಮತ್ತು ಹ್ಯುಮಿಡಿಟಿ ಮೀಟರ್ ಇದರಲ್ಲಿರುವುದು ವಿಶೇಷ. ಸದ್ಯಕ್ಕೆ ಇದು ಪ್ರಾಯೋಗಿಕ ಹಂತದಲ್ಲಿದ್ದು, ಈ ವರ್ಷದ ಜೂನ್‌ನಲ್ಲಿ ಮಾರುಕಟ್ಟೆಗೆ ಬರುವ ಸೂಚನೆಯನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.