ADVERTISEMENT

ಬಿಸಿಲ ಕಾಲದ ನೀರ ನೆನಪು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 14:21 IST
Last Updated 19 ಏಪ್ರಿಲ್ 2017, 14:21 IST
ಬಿಸಿಲ ಕಾಲದ ನೀರ ನೆನಪು
ಬಿಸಿಲ ಕಾಲದ ನೀರ ನೆನಪು   

ಮಳೆಗಾಲ ಎನ್ನುವುದು ಮಳೆಯ ಜೊತೆಗಿನ ಅಪೂರ್ವ ಸಾಂಗತ್ಯದ ಸಮಯ. ವಿಧವಿಧ ರೂಪದಲ್ಲಿ ಎಡೆಬಿಡದೆ ಸುರಿಯುವ ಮಳೆಯ ನೀರು ಖುಷಿ ಉಂಟುಮಾಡುವಂತೆಯೇ ಕಿರಿಕಿರಿಯನ್ನೂ ಉಂಟುಮಾಡುತ್ತದೆ. ಈ ಸಖ್ಯ ಸುಡುಬಿಸಿಲ ಬೇಸಿಗೆಯಲ್ಲಿ ಬೇರೆಯದೇ ಅನುಭವವಾಗುತ್ತದೆ.

ಧಗೆಯ ನಿಟ್ಟುಸಿರು ಬಿಡುವ ನೆಲದೆದೆಯಲ್ಲಿ ನಿಂತಾಗ ನೀರು ಕಾಂಬ ಬಗೆಯೇ ಬೇರೆ. ಒಣಗಿದ ಗಂಟಲಿಗೆ ಸಿಗುವ ಬೊಗಸೆ ನೀರು, ಬೆವರಿದ ಮೈಗೆ ಎರೆಯುವ ತಂಪು ನೀರು, ಕಾದುಕುಂತ ಕಲ್ಲಿನ ಮಡಿಲಿಂದ ಹರಿವ ಜುಳುಜುಳು ನೀರು, ತೋಟದ ಬಾವಿಯಲ್ಲಿ ಕರೆವ ಕಪ್ಪು ನೀರು...

ಸುಡುಸುಡುವ ಬೇಸಿಗೆಯಲ್ಲಿ ನೀರ ನೆನಪೇ ಆಹ್ಲಾದಕರ. ನೀರ ನೆನಪಷ್ಟೇ ಅಲ್ಲ, ನೀರಲ್ಲಿ ಆಡಿದ, ನಿತ್ರಾಣಗೊಂಡ ಪ್ರಾಣಿ–ಪಕ್ಷಿಗೆ ನೀರೂಡಿದ, ಹನಿ ನೀರಿಗಾಗಿ ಪರದಾಡಿದ, ಗೆಳೆಯರೊಡಗೂಡಿ ಮನದಣಿಯೆ ಈಜಾಡಿದ ಎಷ್ಟೊಂದು ನೆನಪುಗಳು ಸಿಹಿನೀರ ಸೆಲೆಯಂತೆಯೇ ಉಕ್ಕುಕ್ಕಿ ಬರುತ್ತವೆ. ಖುಷಿಯ, ತಮಾಷೆಯ, ನೋವಿನ, ಭಾವುಕತೆಯ ಎಷ್ಟೆಲ್ಲ ಪ್ರಸಂಗಗಳನ್ನು ಜಲದೇವತೆ ನಿಮಗೂ ದಯಪಾಲಿಸಿರಬಹುದು.

ADVERTISEMENT

ಬೇಸಿಗೆಕಾಲದ ನಿಮ್ಮ ಜಲಾನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಪತ್ರಗಳು ಏಪ್ರಿಲ್ 29ರ ಒಳಗೆ ನಮ್ಮ ಕೈ ಸೇರಬೇಕು. 

ಕಾಮನಬಿಲ್ಲಿನ ಬಣ್ಣಗಳಲ್ಲಿ ನಿಮ್ಮದೂ ಒಂದು ಪಾಲಿರಲಿ. ನಿಮ್ಮ ಬರಹ, ಪ್ರತಿಭೆ, ಕನಸು, ಆಕ್ರೋಶ, ಹತಾಶೆ ಎಲ್ಲವಕ್ಕೂ ಇಲ್ಲಿ ಅವಕಾಶವಿದೆ. ಹಾಗೆಯೇ ನಿಮ್ಮ ಒಳ್ಳೆಯ ಮಾತುಗಳು ಹಾಗೂ ವಿಮರ್ಶೆಯ ನುಡಿಗಳಿಗಾಗಿ ಎದುರು ನೋಡುತ್ತಿರುತ್ತೇವೆ.

ವಿಳಾಸ: ಸಂಪಾದಕರು, ಕಾಮನಬಿಲ್ಲು ವಿಭಾಗ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು 560001.

ಇ-ಮೇಲ್: kamanabillu@prajavani.co.in ನಿಮ್ಮ ಅನಿಸಿಕೆಗಳನ್ನು ಈ ನಂಬರ್‌ಗೆ ವಾಟ್ಸ್ಯಾಪ್ ಮಾಡಿ: 9844326639

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.