ADVERTISEMENT

ಬೆಳದಿಂಗಳ ನೋಡಾ...

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಬೆಳದಿಂಗಳ ನೋಡಾ...
ಬೆಳದಿಂಗಳ ನೋಡಾ...   

ಸುರಿವ ಬಿಸಿಲುಮಳೆಗೆ ಪ್ರತಿಯಾಗಿ ಬೆವರು ಕೂಡ ಧಾರಾಕಾರವಾಗಿ ಸುರಿಯುವ ತಿಂಗಳು ಏಪ್ರಿಲ್. ಬಿಸಿಲ ಬೇಗೆಯ ತಾರಕದ ದಿನಗಳ ಈ ತಿಂಗಳಿಗೆ ಬೆಳದಿಂಗಳ ಆಯಾಮವೂ ಇದೆ – ಕತ್ತಲ ಅಂಚಿನಲ್ಲಿ ಹೊಳೆಯುವ ಬೆಳ್ಳಿರೇಖೆಯಂತೆ! ‘ಅಂಬೇಡ್ಕರ್‌ ಜಯಂತಿ’ ಕಾರಣದಿಂದಾಗಿ ಇದು ಅರಿವು, ಬಿಡುಗಡೆ ಹಾಗೂ ಮಾನವೀಯತೆಯ ರೂಪಕದ ತಿಂಗಳೂ ಹೌದು.

ಬಿಸಿಲಿನ ಬಗ್ಗೆ, ಬಿಸಿಲು ಉಂಟುಮಾಡುವ ದಣಿವಿನ ಕುರಿತು ವಿಷಾದ–ವಿರಾಗ ಭಾವ ತಳೆಯುವ ಬದಲು, ಇದೇ ಅವಧಿಯಲ್ಲಿ ನಮ್ಮೊಳಗನ್ನು ಬೆಳಗುವ ಸಂಗತಿಗಳ ಬಗ್ಗೆ ಯೋಚಿಸಿದರೆ ಮನಸ್ಸು ತುಂಬಿಬರುತ್ತದೆ. ಹೀಗೆ, ಏಪ್ರಿಲ್‌ ನಿಮ್ಮನ್ನು ಸೆಳೆದ, ನಿಮ್ಮೊಳಗನ್ನು ಬೆಳಗಿದ ಸಂದರ್ಭ ಯಾವುದು? ನಿಮ್ಮ ಬದುಕಿನಲ್ಲಿ ಏಪ್ರಿಲ್‌ಗೆ ಇರುವ ಮಹತ್ವ ಯಾವ ರೀತಿಯದು?

ಈ ಬಿಸಿಲ ತಿಂಗಳಿನೊಂದಿಗೆ ನಿಮ್ಮ ಬದುಕು ಬೆಸೆದುಕೊಂಡ ಬಗೆ ಯಾವ ಬಗೆಯದು? ಏಪ್ರಿಲ್‌ನೊಂದಿಗಿನ ನಿಮ್ಮ ಸಖ್ಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಮಾರ್ಚ್ 30ರ ಒಳಗೆ ಪತ್ರಗಳು ತಲುಪಬೇಕು. ವಿಳಾಸಕ್ಕೆ 7ನೇ ಪುಟದ ಅಂಚನ್ನು ನೋಡಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.