ADVERTISEMENT

ರೆನೊದಿಂದ ಭಾರತಕ್ಕೆ ಎರಡು ಮಾದರಿ ಕಾರುಗಳು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
ರೆನೊದಿಂದ ಭಾರತಕ್ಕೆ ಎರಡು ಮಾದರಿ ಕಾರುಗಳು
ರೆನೊದಿಂದ ಭಾರತಕ್ಕೆ ಎರಡು ಮಾದರಿ ಕಾರುಗಳು   

ಭಾರತದಲ್ಲಿ ತನ್ನ ಮಾರಾಟವನ್ನು ಇನ್ನಷ್ಟು ಹೆಚ್ಚಿಸುವ, ಇಲ್ಲಿನ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಹೊಸ ಛಾಪು ಮೂಡಿಸುವ ಉದ್ದೇಶದೊಂದಿಗೆ ರೆನೊ ಎರಡು ಹೊಸ ಮಾದರಿಗಳನ್ನು ಹೊರತರುವ ಸಿದ್ಧತೆಯಲ್ಲಿದೆ.

ಭಾರತದ ರಸ್ತೆಗೆ ತಕ್ಕಂತೆ ಹಾಗೂ ಇಲ್ಲಿನ ಗ್ರಾಹಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಮಾದರಿಗಳನ್ನು ಹೊರತರುವ ಆಲೋಚನೆ ಮಾಡಿದೆಯಂತೆ.

ಏಳು ಸೀಟ್‌ಗಳ ಕ್ವಿಡ್ ಹಾಗೂ ಮತ್ತೊಂದು ಹೊಸ ಮಾದರಿಯ ಕಾರನ್ನು ಅಭಿವೃದ್ಧಿ ಪಡಿಸುತ್ತಿದ್ದು ಇವೆರಡನ್ನೂ ಸಿಎಂಎಫ್‌ ಎ ಪ್ಲಸ್ ಪ್ಲಾಟ್‌ಫಾರ್ಮ್‌ ಮೇಲೆ ವಿನ್ಯಾಸಗೊಳಿಸಿರುವುದು ವಿಶೇಷ. ಏಳು ಸೀಟರ್‌ ಕ್ವಿಡ್‌ ಅನ್ನು ಮೊದಲ ಬಾರಿ ಕಾರು ಖರೀದಿಸುವವರನ್ನು ಹಾಗೂ ಉತ್ತಮ ಪ್ಯಾಸೆಂಜರ್ ವಾಹನ ಎದುರು ನೋಡುತ್ತಿರುವವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಇದು ಈಗಾಗಲೇ ಅಭಿವೃದ್ಧಿ ಹಂತದಲ್ಲಿದೆ.‌

ADVERTISEMENT

ಸಿಎಂಎಫ್‌ ಎ ಪ್ಲಸ್ ಪ್ಲಾಟ್‌ಫಾರ್ಮ್‌ ಅನ್ನು ಬಹೂಪಯೋಗಿ ಉದ್ದೇಶಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಕಾರಿನ ಕಾರ್ಯಕ್ಷಮತೆ ಹೆಚ್ಚಿಸಲು ಇದು ನೆರವಾಗಲಿದೆ ಎಂದು ಹೇಳಿಕೊಂಡಿದ್ದಾರೆ ರೆನೊದ ಅಲಯನ್ಸ್‌ ವ್ಯವಸ್ಥಾಪಕ ನಿರ್ದೇಶಕ ಡೆಟೌರ್ಬೆಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.