ADVERTISEMENT

ವಿಡಿಯೊ ಡೌನ್‌ಲೋಡ್‌ಗೆ ಸರಳ ಮಾರ್ಗ

ತಂತ್ರೋಪನಿಷತ್ತು

ದಯಾನಂದ ಎಚ್‌.ಎಚ್‌.
Published 30 ನವೆಂಬರ್ 2016, 19:30 IST
Last Updated 30 ನವೆಂಬರ್ 2016, 19:30 IST
ವಿಡಿಯೊ ಡೌನ್‌ಲೋಡ್‌ಗೆ ಸರಳ ಮಾರ್ಗ
ವಿಡಿಯೊ ಡೌನ್‌ಲೋಡ್‌ಗೆ ಸರಳ ಮಾರ್ಗ   

ಚೆಂದದ ವಸ್ತು ಕಣ್ಣಿಗೆ ಬಿದ್ದಾಗ ಅದು ತನ್ನದಾಗಬೇಕೆಂಬ ಆಸೆ ಹುಟ್ಟುವುದು ಸಾಮಾನ್ಯ. ಇಂಥ ಆಸೆಯೇನು ಇಂದು ನಿನ್ನೆಯದಲ್ಲ. ಮನುಷ್ಯನ ಮೆದುಳು ಯೋಚಿಸಲು ಶುರುಮಾಡಿದಂದಿನಿಂದ ಈ ಆಸೆಯೂ ಹುಟ್ಟಿಕೊಂಡಿದೆ. ಚೆಂದದ ಫೋಟೊ ಅಥವಾ ವಿಡಿಯೊ ನೋಡಿದಾಗ ಅದು ನಮ್ಮ ಬಳಿ ಇರಬೇಕೆಂದು ಮನಸ್ಸು ಬಯಸುತ್ತದೆ.

ಫೋಟೊ ಸೇವ್‌ ಮಾಡಿಕೊಳ್ಳುವುದು ಸುಲಭ. ಆದರೆ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳುವುದು ಹಲವರಿಗೆ ಪ್ರಯಾಸ ಎನಿಸಿರುತ್ತದೆ. ಫೋಟೊ ಡೌನ್‌ಲೋಡ್‌ ಮಾಡಿದಂತೆಯೇ ವಿಡಿಯೊ ಕೂಡ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಸರಳ ಮಾರ್ಗದ ಮೂಲಕ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳಲು ಹಲವು ವಿಧಾನಗಳಿವೆ.ಯೂಟ್ಯೂಬ್‌ನ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳಲು ಇರುವ ಸರಳ ಮಾರ್ಗವೊಂದರ ಬಗ್ಗೆ ಈಗ ತಿಳಿಯೋಣ.

ಯೂಟ್ಯೂಬ್‌ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳಲು ಇರುವ ಮಾರ್ಗಗಳಲ್ಲಿ onlinevideoconverter.com ಕೂಡ ಒಂದು. ಯಾವ ಸಾಫ್ಟ್‌ವೇರ್‌ ಅನ್ನೂ ಸಿಸ್ಟಮ್‌ಗೆ ಇನ್‌ಸ್ಟಾಲ್‌ ಮಾಡಿಕೊಳ್ಳದೆ ಆನ್‌ಲೈನ್‌ ಮೂಲಕವೇ ಯೂಟ್ಯೂಬ್‌ ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳುವುದು ಈ ವೆಬ್‌ಸೈಟ್‌ ಮೂಲಕ ಸಾಧ್ಯ. ಮೊದಲು onlinevideoconverter.com ಪುಟ ತೆರೆದುಕೊಳ್ಳಿ.

ಇಲ್ಲಿ CONVERT A VIDEO LINK/ URL ಮೇಲೆ ಕ್ಲಿಕ್‌ ಮಾಡಿ. ಮತ್ತೊಂದು ಟ್ಯಾಬ್‌ನಲ್ಲಿ ಯೂಟ್ಯೂಬ್‌ ತೆರೆಯಿರಿ. ಯೂಟ್ಯೂಬ್‌ನಲ್ಲಿ ನೀವು ಡೌನ್‌ಲೋಡ್‌ ಮಾಡಿಕೊಳ್ಳಬೇಕಿರುವ ವಿಡಿಯೊ ಹುಡುಕಿ. ಉದಾಹರಣೆಗೆ, ನೀವು ‘ಪ್ರಜಾವಾಣಿ’ಯ ವಿಡಿಯೊ ಒಂದನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕೆಂದರೆ ಯೂಟ್ಯೂಬ್‌ನಲ್ಲಿ Prajavani ಎಂದು ಕ್ಲಿಕ್ಕಿಸಿ. ಪ್ರಜಾವಾಣಿ ವಿಡಿಯೊ ಲಿಸ್ಟ್‌ಗಳಲ್ಲಿ ನಿಮಗೆ ಬೇಕಿರುವ ವಿಡಿಯೊ ಮೇಲೆ ಕ್ಲಿಕ್ಕಿಸಿ. ಆಗ ವಿಡಿಯೊ ಪ್ಲೇ ಆಗುತ್ತದೆ.

ಯೂಟ್ಯೂಬ್‌ನಲ್ಲಿ ಪ್ಲೇ ಆಗುತ್ತಿರುವ ವಿಡಿಯೊದ ಯುಆರ್‌ಎಲ್‌ ಕಾಪಿ ಮಾಡಿ onlinevideoconverterನ ಸರ್ಚ್‌ ಆಯ್ಕೆ ಮೇಲೆ ಪೇಸ್ಟ್‌ ಮಾಡಿ. ಸರ್ಚ್‌ನ ಕೆಳಗಿರುವ ಆಯ್ಕೆಗಳಲ್ಲಿ ನಿಮಗೆ ಬೇಕಾದ ಫಾರ್ಮಾಟ್‌ ಆಯ್ದುಕೊಳ್ಳಿ. ನಿಮಗೆ MP4 ಫಾರ್ಮಾಟ್‌ನಲ್ಲಿ ವಿಡಿಯೊ ಬೇಕೆಂದಾದರೆ MP4 ಆಯ್ಕೆ ಮಾಡಿಕೊಂಡು START ಮೇಲೆ ಕ್ಲಿಕ್ಕಿಸಿ.

ಸ್ಟಾರ್ಟ್‌ ಕೊಟ್ಟ ಬಳಿಕ ನೀವು ಆಯ್ಕೆ ಮಾಡಿಕೊಂಡ ವಿಡಿಯೊ ಡೌನ್‌ಲೋಡ್‌ಗೆ ಸಿದ್ಧವಿರುತ್ತದೆ. ಈಗ ಪರದೆಯ ಮೇಲೆ ಕಾಣುವ DOWNLOAD ಕ್ಲಿಕ್ಕಿಸಿ. ಡೌನ್‌ಲೋಡ್‌ ಕ್ಲಿಕ್ಕಿಸಿದ ಮೇಲೆ ನಿಮ್ಮ ಸಿಸ್ಟಮ್‌ಗೆ ವಿಡಿಯೊ ಡೌನ್‌ಲೋಡ್‌ ಆಗುತ್ತದೆ. ನಿಮ್ಮಲ್ಲಿರುವ ಇಂಟರ್ನೆಟ್‌ ವೇಗಕ್ಕೆ ಅನುಗುಣವಾಗಿ ವಿಡಿಯೊ ಡೌನ್‌ಲೋಡ್‌ ಆಗುವ ಸಮಯದಲ್ಲೂ ವ್ಯತ್ಯಾಸವಾಗುತ್ತದೆ.

ವಿಡಿಯೊ ಡೌನ್‌ಲೋಡ್‌ ಮಾಡಿಕೊಳ್ಳಲು ಈ ಲಿಂಕ್‌ ಬಳಸಿ: bit.ly/2dhymur

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.