ADVERTISEMENT

ಅಂಧರ ವಿಶ್ವಕಪ್‌: ಬಾಂಗ್ಲಾ ಎದುರು ಮೊದಲ ಪಂದ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:54 IST
Last Updated 22 ಜನವರಿ 2017, 19:54 IST

ಬೆಂಗಳೂರು: ಅಂಧರ ಎರಡನೇ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯ ಪಂದ್ಯಗಳು ಜನವರಿ 30ರಿಂದ ಆರಂಭವಾಗಲಿದ್ದು ಆತಿಥೇಯ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಪೈಪೋಟಿ ನಡೆಸಲಿದೆ.

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಷ್ಟೇ ನಡೆದಿದ್ದ ವಿಶ್ವಕಪ್‌ನ ಪಂದ್ಯಗಳನ್ನು ಈ ಬಾರಿ ದೇಶದ ವಿವಿಧ ನಗರಗಳಲ್ಲಿ ಆಯೋಜಿಸಲಾಗಿದೆ. ಆಂಧ್ರದ ಅಜಯ್‌ ಕುಮಾರ್‌ ರೆಡ್ಡಿ ತಂಡದ ನಾಯಕರಾಗಿದ್ದಾರೆ. ಕರ್ನಾಟಕದ ಪ್ರಕಾಶ್‌ ಜಯರಾಮಯ್ಯ ಮತ್ತು ಚಿಕ್ಕಮಗಳೂರಿನ ಆರ್‌. ಸುನಿಲ್‌ ತಂಡದಲ್ಲಿದ್ದಾರೆ. ಬಾಂಗ್ಲಾ ಎದುರಿನ ಪಂದ್ಯ ದೆಹಲಿಯಲ್ಲಿ ನಡೆಯಲಿದೆ.

ನಂತರದ ಪಂದ್ಯಗಳಲ್ಲಿ ಆತಿಥೇಯ ತಂಡ ಕ್ರಮವಾಗಿ ವೆಸ್ಟ್‌ ಇಂಡೀಸ್‌್, ಪಾಕಿಸ್ತಾನ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಜಿ ಲೆಂಡ್‌, ನೇಪಾಳ ತಂಡಗಳ ಎದುರು ಪೈಪೋಟಿ ನಡೆಸಲಿದೆ. ಫೆ.10 ಮತ್ತು 11ರಂದು ಹೈದರಾಬಾದ್‌ ಮತ್ತು ಬೆಂಗ ಳೂರಿನ ಆಲೂರು ಕ್ರೀಡಾಂಗಣದಲ್ಲಿ ಸೆಮಿಫೈನಲ್‌ ಪಂದ್ಯಗಳು ಜರುಗಲಿವೆ. 12ರಂದು ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ಫೈನಲ್ ಜರುಗಲಿದೆ. ಹಿಂದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.