ADVERTISEMENT

ಅಗ್ರಸ್ಥಾನದ ಮೇಲೆ ಬಿಎಫ್‌ಸಿ ಕಣ್ಣು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಬಿಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ (ಮುಂದೆ) ಸಹ ಆಟಗಾರರ ಜೊತೆ ಅಭ್ಯಾಸ ನಡೆಸಿದರು  –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಬಿಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ (ಮುಂದೆ) ಸಹ ಆಟಗಾರರ ಜೊತೆ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಿಂದಿನ ಪಂದ್ಯಗಳಲ್ಲಿ ಪ್ರಮುಖ ಆಟಗಾರರ ಗೈರಿನ ನಡುವೆಯೂ ಅಮೋಘ ಆಟವಾಡಿದ್ದ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಹೋರಾಟದಲ್ಲಿ ಬಿಎಫ್‌ಸಿ ತಂಡ ಸ್ಪೋರ್ಟಿಂಗ್‌ ಕ್ಲಬ್‌ ಡಿ ಗೋವಾ ವಿರುದ್ಧ ಸೆಣಸಲಿದೆ.

ಸದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಆತಿಥೇಯ ತಂಡ ಈ ಪಂದ್ಯದಲ್ಲಿ ಗೆದ್ದು ಅಗ್ರ ಸ್ಥಾನಕ್ಕೆ ಏರುವ ತವಕದಲ್ಲಿದೆ.

ಬಿಎಫ್‌ಸಿ  ಇದುವರೆಗೆ ಒಮ್ಮೆಯೂ ಸ್ಪೋರ್ಟಿಂಗ್‌ ವಿರುದ್ಧ ಸೋತಿಲ್ಲ. ಈ ಬಾರಿಯೂ ಗೋವಾದ ತಂಡವನ್ನು ಮಣಿಸಿ ಅಜೇಯ ಗೆಲುವಿನ ಓಟ ಮುಂದುವರಿಸುವುದು ಆತಿಥೇಯ ತಂಡದ ಆಲೋಚನೆಯಾಗಿದೆ.

ಇನ್ನೊಂದೆಡೆ ಸ್ಪೋರ್ಟಿಂಗ್‌ ಈ ಪಂದ್ಯದಲ್ಲಿ ಗೆದ್ದು ಹಿಂದಿನ ಪಂದ್ಯಗಳಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಲೆಕ್ಕಾಚಾರ ಹೊಂದಿದೆ. ಉಭಯ ತಂಡಗಳ ಬಲಾಬಲವನ್ನು ತುಲನೆ ಮಾಡಿ ನೋಡಿದರೆ ಬಿಎಫ್‌ಸಿಯೇ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ಕಸರತ್ತು: ಅಗ್ರಸ್ಥಾನಕ್ಕೆ ಏರುವ ಗುರಿ ಹೊಂದಿರುವ ಆತಿಥೇಯರು ಸೋಮವಾರ ಕಠಿಣ ಅಭ್ಯಾಸ ನಡೆಸಿದರು. ಹಿಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಸುನಿಲ್‌ ಚೆಟ್ರಿ, ರಾಬಿನ್‌ ಸಿಂಗ್‌ ಮತ್ತು ಯೂಜೆನ್‌ಸನ್ ಲಿಂಗ್ಡೊ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.