ADVERTISEMENT

ಅನುರಣಿಸಿದ ಸಚಿನ್, ಸಚಿನ್‌...

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 19:30 IST
Last Updated 29 ಮಾರ್ಚ್ 2015, 19:30 IST

ಮೆಲ್ಬರ್ನ್‌ (ಐಎಎನ್‌ಎಸ್‌/ ಪಿಟಿಐ/ ಎಎಫ್‌ಪಿ): ಐದನೇ ಟ್ರೋಫಿಗೆ ಮುತ್ತಿಕ್ಕಿದ ಆಸ್ಟ್ರೇಲಿಯಾ ತಂಡದ ಸಾಧನೆ ಮೆಲ್ಬರ್ನ್‌ ಅಂಗಳದಲ್ಲಿ ಕಂಗೊಳಿಸು ತ್ತಿತ್ತು. ಇನ್ನೊಂದೆಡೆ ಬ್ಯಾಟಿಂಗ್‌ ಚಾಂಪಿಯನ್‌ ‘ಸಚಿನ್‌... ಸಚಿನ್‌...’ ಎನ್ನುವ ಹರ್ಷೋದ್ಗಾರ ಪ್ರೇಕ್ಷಕರ ಗ್ಯಾಲರಿಯಿಂದ ತೂರಿಬಂದಿತ್ತು.

ವಿಶ್ವದ ಶ್ರೇಷ್ಠ ತಂಡಗಳ ನಡುವಿನ ಫೈನಲ್‌ ಆಗಿದ್ದ ಕಾರಣ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಸಚಿನ್‌ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. 93,013 ಅಭಿಮಾನಿಗಳು ಈ ಪಂದ್ಯಕ್ಕೆ ಸಾಕ್ಷಿಯಾದರು.

ಇದು ಮೆಲ್ಬರ್ನ್‌ ಅಂಗಳದಲ್ಲಿ ದಾಖಲೆಯಾಗಿ ರೂಪು ಗೊಂಡಿತು. ಎರಡು ವರ್ಷಗಳ ಹಿಂದೆ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ‘ಬಾಕ್ಸಿಂಗ್‌ ಡೇ’ ಟೆಸ್ಟ್‌ಗೆ 91 ಸಾವಿರ ಜನ ಸೇರಿದ್ದು ಹಿಂದಿನ ದಾಖಲೆಯಾಗಿತ್ತು. 23 ವರ್ಷಗಳ ಹಿಂದೆ ಇದೇ ಅಂಗಳದಲ್ಲಿ ನಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ನಡುವಿನ ವಿಶ್ವಕಪ್‌ ಫೈನಲ್‌ಗೆ 87 ಸಾವಿರ ಜನ ಸೇರಿದ್ದರು.

ಸರಣಿ ಶ್ರೇಷ್ಠ ಗೌರವ ಪಡೆದ ಆಸ್ಟ್ರೇಲಿಯಾದ ಮಿಷೆಲ್‌ ಸ್ಟಾರ್ಕ್‌ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಜೇಮ್ಸ್‌ ಫಾಕ್ನರ್‌ ಅವರಿಗೆ ಸಚಿನ್‌ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆಯಂತೂ ಅಭಿ ಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಹೋದ ವಿಶ್ವಕಪ್‌ನಲ್ಲಿ ಆಡಿದ್ದ ಸಚಿನ್‌ ಈ ಬಾರಿ ಟೂರ್ನಿಯ ರಾಯಭಾರಿಯಾಗಿದ್ದರು.

ಮೆಚ್ಚುಗೆ: ಕಾಂಗರೂಗಳ ನಾಡಿನ ಸಾಧನೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.