ADVERTISEMENT

ಅಫ್ಗಾನಿಸ್ತಾನ ಟೆಸ್ಟ್‌: ಸಿಒಎ ಸ್ವಾಗತ

ಪಿಟಿಐ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST

ನವದೆಹಲಿ: ಅಫ್ಗಾನಿಸ್ತಾನದ ಚೊಚ್ಚಲ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಮುಂದಾಗಿರುವ ಬಿಸಿಸಿಐ ನಿರ್ಣಯವನ್ನು ಆಡಳಿತಾಧಿಕಾರಿಗಳ ಸಮಿತಿ ಅಧ್ಯಕ್ಷ ವಿನೋದ್ ರಾಯ್‌ ಸ್ವಾಗತಿಸಿದ್ದಾರೆ.

‘ಅಫ್ಗಾನಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಸದಾ ಬೆಂಬಲವಾಗಿ ನಿಂತಿದೆ. ಇದು ಅತ್ಯಂತ ಖುಷಿಯ ವಿಷಯ. ಈಗ ಆ ತಂಡವನ್ನು ಟೆಸ್ಟ್ ಆಡಲು ಆಹ್ವಾನಿಸಲು ಮುಂದಾಗಿರುವುದು ಇನ್ನಷ್ಟು ಸಂತಸ ತಂದಿದೆ. ಇದು ಆ ದೇಶದಲ್ಲಿ ಕ್ರಿಕೆಟ್‌ ಬೆಳೆಯಲು ಮತ್ತು ಒಟ್ಟಿನಲ್ಲಿ ಕ್ರೀಡೆ ಅಭಿವೃದ್ಧಿಯಾಗಲು ನೆರವಾಗಲಿದೆ’ ಎಂದು ಅವರು ಪ್ರಕಟಣೆಯೊಂದರಲ್ಲಿ ಹೇಳಿದ್ದಾರೆ.

ಕಳೆದ ಜೂನ್‌ನಲ್ಲಿ ಟೆಸ್ಟ್ ಮಾನ್ಯತೆ ಗಳಿಸಿದ ಅಫ್ಗಾನಿಸ್ತಾನ ತಂಡದ ಮೊದಲ ಟೆಸ್ಟ್‌ಗೆ ಆತಿಥ್ಯ ವಹಿಸಲು ಸೋಮವಾರ ನಡೆದ ಬಿಸಿಸಿಐ ವಿಶೇಷ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ADVERTISEMENT

ಅಫ್ಗಾನಿಸ್ತಾನ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡಿದ ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೊಹ್ರಿ ‘ಈ ಐತಿಹಾಸಿಕ ಹಣಾಹಣಿಗೆ ಸಾಕ್ಷಿಯಾಗಲು ಮನಸ್ಸು ಹಾತೊರೆಯುತ್ತಿದೆ. 2018–2019ರ ಕ್ರಿಕೆಟ್‌ ಋತುವಿನಲ್ಲಿ ಪಂದ್ಯ ನಡೆಯಲಿದ್ದು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಬಹಿರಂಗಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.