ADVERTISEMENT

ಆರ್‌ಸಿಬಿಗೆ 209 ರನ್‌ ಗುರಿ

​ಪ್ರಜಾವಾಣಿ ವಾರ್ತೆ
Published 29 ಮೇ 2016, 16:14 IST
Last Updated 29 ಮೇ 2016, 16:14 IST
ಆರ್‌ಸಿಬಿ ಎದುರಿನ ಭಾನುವಾರದ ಪಂದ್ಯದಲ್ಲಿ 38 ಎಸೆತಗಳಲ್ಲಿ 69 ರನ್‌ ಗಳಿಸಿದ ಡೇವಿಡ್ ವಾರ್ನರ್ – ಪ್ರಜಾವಾಣಿ ಚಿತ್ರ/ ಆರ್‌.ಶ್ರೀಕಂಠ ಶರ್ಮ
ಆರ್‌ಸಿಬಿ ಎದುರಿನ ಭಾನುವಾರದ ಪಂದ್ಯದಲ್ಲಿ 38 ಎಸೆತಗಳಲ್ಲಿ 69 ರನ್‌ ಗಳಿಸಿದ ಡೇವಿಡ್ ವಾರ್ನರ್ – ಪ್ರಜಾವಾಣಿ ಚಿತ್ರ/ ಆರ್‌.ಶ್ರೀಕಂಠ ಶರ್ಮ   

ಬೆಂಗಳೂರು: ಐಪಿಎಲ್‌ ಫೈನಲ್‌ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಆರ್‌ಸಿಬಿಗೆ 209 ರನ್‌ ಗೆಲುವಿನ ಗುರಿ ನೀಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಸನ್‌ರೈಸರ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 208 ರನ್‌ ಕಲೆಹಾಕಿತು.

ಸನ್‌ರೈಸರ್ಸ್‌ ತಂಡದ ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 69 ರನ್‌ ಪೇರಿಸಿದರು. ಶಿಖರ್ ಧವನ್ 25 ಎಸೆತಗಳಲ್ಲಿ 28 ರನ್‌, ಯುವರಾಜ್‌ ಸಿಂಗ್ 23 ಎಸೆತಗಳಲ್ಲಿ 38 ರನ್‌ ಹಾಗೂ ಬೆನ್‌ ಕಟ್ಟಿಂಗ್‌ 15 ಎಸೆತಗಳಲ್ಲಿ 39 ರನ್‌ ಗಳಿಸಿದರು.

ADVERTISEMENT

ಸದ್ಯ ಪಂದ್ಯಕ್ಕೆ ಮಳೆಯ ಆತಂಕವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.