ADVERTISEMENT

ಇಂದು ತವರಿನ ಕ್ರೀಡಾಂಗಣ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST

ಮುಂಬೈ (ಪಿಟಿಐ): ಐಪಿಎಲ್ ಆಡಳಿತ ಮಂಡಳಿಯ ಸಭೆ ನವದೆಹಲಿಯಲ್ಲಿ ಶುಕ್ರವಾರ ನಡೆಯಲಿದ್ದು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡದ ತವರಿನ ಕ್ರೀಡಾಂಗಣವನ್ನು ನಿರ್ಧರಿಸಲಾಗುತ್ತದೆ.

ಭೀಕರ ಬರ ಇರುವ ಕಾರಣ ಮಹಾರಾಷ್ಟದಲ್ಲಿ ಮುಂದಿನ ತಿಂಗಳು ಆಯೋಜನೆಯಾಗಿರುವ ಎಲ್ಲಾ ಐಪಿಎಲ್‌ ಪಂದ್ಯಗಳನ್ನು ಸ್ಥಳಾಂತರಿಸ ಬೇಕು ಎಂದು  ಏಪ್ರಿಲ್‌ ಎರಡನೇ ವಾರದಲ್ಲಿ ಬಾಂಬೆ ಹೈಕೋರ್ಟ್‌ ತೀರ್ಪು ನೀಡಿತ್ತು. ಆದ್ದರಿಂದ ಮಹಾರಾಷ್ಟ್ರದ ಐಪಿಎಲ್ ತಂಡಗಳಾದ ಮುಂಬೈ ಇಂಡಿ ಯನ್ಸ್‌ ಮತ್ತು ಪುಣೆ ರೈಸಿಂಗ್‌ ಸೂಪರ್‌ ಜೈಂಟ್ಸ್‌ ಬದಲಿ ಕ್ರೀಡಾಂಗಣಗಳನ್ನು ಹುಡುಕಿಕೊಳ್ಳಬೇಕಿತ್ತು.

ಪುಣೆ ತಂಡ ಈಗಾಗಲೇ ವಿಶಾಖಪಟ್ಟಣವನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡಿದೆ. ‘ಐಪಿಎಲ್‌ ಆಡಳಿತ ಮಂಡಳಿಯ ಸಭೆಯಲ್ಲಿ ಎರಡು ತಂಡಗಳ ತವರಿನ ಕ್ರೀಡಾಂಗಣಗಳ ವಿಷಯವೇ ಮುಖ್ಯ ವಾಗಿ ಚರ್ಚೆಗೆ ಬರಲಿವೆ. ಶುಕ್ರವಾರವೇ ಕ್ರೀಡಾಂಗಣಗಳು ನಿರ್ಧಾರವಾಗಲಿವೆ’ ಎಂದು ಐಪಿಎಲ್‌ ಮಂಡಳಿಯ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಮತ್ತು ಪುಣೆ ತಂಡಗಳ ನಡುವೆ ಮೇ 1ರಂದು ಪುಣೆ ಯಲ್ಲಿ ಪಂದ್ಯ ಆಯೋಜನೆ ಯಾಗಿದೆ.  ಈ ಪಂದ್ಯವನ್ನು ನಿಗದಿತ ವೇಳಾಪಟ್ಟಿ ಯಂತೆ ನಡೆಸಲು ಹೈಕೋರ್ಟ್‌ ಅನು ಮತಿ ಕೊಟ್ಟಿದೆ.

ಬಲ್ಲ ಮೂಲಗಳ ಮಾಹಿತಿ ಪ್ರಕಾರ ಮುಂಬೈ ತಂಡ ಮೊಹಾಲಿ, ಧರ್ಮ ಶಾಲಾ ಮತ್ತು ಕಾನ್ಪುರ ಇವುಗಳಲ್ಲಿ ತವರಿನ ಕ್ರೀಡಾಂಗಣವನ್ನು ಆಯ್ಕೆ ಮಾಡಿಕೊಳ್ಳಲಿದೆ. ಮುಂಬೈ ಫ್ರಾಂಚೈಸ್‌ ಮೊದಲು ಜೈಪುರದಲ್ಲಿ ಪಂದ್ಯ ಆಡಲು ಒಲವು ವ್ಯಕ್ತಪಡಿಸಿತ್ತು. ಆದರೆ ರಾಜ ಸ್ತಾನದ ಹೈಕೋರ್ಟ್‌ನಲ್ಲಿಯೂ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿ ರುವುದರಿಂದ ಈ ವಿಚಾರವನ್ನು ಕೈಬಿಟ್ಟಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.