ADVERTISEMENT

ಎರಡನೇ ಸುತ್ತಿಗೆ ರಾಮಕುಮಾರ್ ಲಗ್ಗೆ

ಪಿಟಿಐ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ನವದೆಹಲಿ: ಭಾರತದ ರಾಮಕುಮಾರ್ ರಾಮನಾಥನ್ ಕೊಲಂಬಸ್‌ ಚಾಲೆಂಜರ್‌ ಟೆನಿಸ್ ಟೂರ್ನಿಯಲ್ಲಿ ಗುರುವಾರ ಎರಡನೇ ಸುತ್ತು ತಲುಪಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ರಾಮಕುಮಾರ್‌ 7–6, 6–4ರಲ್ಲಿ ಅಮೆರಿಕಾದ ಬಂಗೌರಾ ಸೆಕು ವಿರುದ್ಧ ಜಯಿಸಿದರು. ರಾಮಕುಮಾರ್ ಕಠಿಣ ಎದುರಾಳಿ ವಿರುದ್ಧದ ಪಂದ್ಯದಲ್ಲಿ ಪ್ರಯಾಸದಿಂದ ಗೆದ್ದರು. ಎರಡು ಗಂಟೆ ಆರು ನಿಮಿಷಗಳ ಪಂದ್ಯ ಇದಾಗಿತ್ತು.

ಯೂಕಿ ಭಾಂಬ್ರಿ ಮೊಣಕಾಲು ನೋವಿನಿಂದಾಗಿ ಮಧ್ಯದಲ್ಲಿಯೇ ಪಂದ್ಯದಿಂದ ಹಿಂದೆ ಸರಿದರು. ಮೊದಲ ಎರಡು ಸೆಟ್‌ಗಳಲ್ಲಿ ಅವರು 6–4, 6–7ರಲ್ಲಿ ಜೋಸ್‌ ಫರ್ನಾಂಡಿಸ್‌ ಎದುರು ಆಡಿದ್ದರು. ಬಳಿಕ ಮೂರನೇ ಸೆಟ್‌ನಲ್ಲಿ 0–2ರಲ್ಲಿ ಹಿಂದಿದ್ದ ವೇಳೆ ನೋವು ಹೆಚ್ಚಾದ ಕಾರಣ ಆಟದಲ್ಲಿ ಅವರಿಗೆ ಗಮನ ಕೇಂದ್ರೀಕರಿಸಲು ಆಗಲಿಲ್ಲ. ಎರಡು ಗಂಟೆ 16 ನಿಮಿಷ ಅವರು ಅಂಕಣದಲ್ಲಿ ಇದ್ದರು.

ADVERTISEMENT

ಟೂರ್ನಿಯಲ್ಲಿ ರಾಮಕುಮಾರ್ ಮಾತ್ರ ಭಾರತದ ಭರವಸೆ ಎನಿಸಿದ್ದಾರೆ. ಪ್ರಜ್ಞೇಶ್‌ ಗುಣೇಶ್ವರನ್‌ ಮೊದಲ ಸುತ್ತಿನಲ್ಲೇ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.