ADVERTISEMENT

ಎರಡನೇ ಸುತ್ತಿಗೆ ಸೈನಾ, ಸಿಂಧು

ಪಿಟಿಐ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಸೈನಾ ನೆಹ್ವಾಲ್ ಆಟದ ವೈಖರಿ
ಸೈನಾ ನೆಹ್ವಾಲ್ ಆಟದ ವೈಖರಿ   

ಸಿಡ್ನಿ: ಭಾರತದ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಮತ್ತು ಬಿ.ಸಾಯ್‌ ಪ್ರಣೀತ್‌ ಆಸ್ಟ್ರೇಲಿಯಾ ಓಪನ್‌ ಸೂಪರ್ ಸರಣಿಯ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಣಯ್‌, ಪರುಪಳ್ಳಿ ಕಶ್ಯಪ್‌, ಸಿರಿಲ್ ವರ್ಮಾ ಮತ್ತು ಪ್ರಣಯ್ ಸೋಲು ಕಂಡಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಮಹಿಳೆಯರು ಮತ್ತು ಪುರುಷರು ಕೂಡ ನಿರಾಸೆ ಅನುಭವಿಸಿದರು.

ಶ್ರೀಕಾಂತ್‌ ಚೀನಾ ಥೈಪೆಯ ಕಾನ್ ಚಾವೊ ಯು ಅವರನ್ನು 21–13, 21–16ರಿಂದ ಮಣಿಸಿದರು. ಸಾಯಿ ಪ್ರಣೀತ್‌ಗೆ ಇಂಡೊನೇಷ್ಯಾದ ಟೋಮಿ ಸುಜಿಯಾರ್ಟೊ ಎದುರು ಅವರು 10–21, 21–12, 21–10ರಿಂದ ಗೆಲುವು ಸಾಧಿಸಿದರು.

ADVERTISEMENT

ಮಹಿಳೆಯರ ವಿಭಾಗದಲ್ಲಿ ಸೈನಾ ನೆಹ್ವಾಲ್‌ ಪ್ರಬಲ ಪ್ರತಿಸ್ಪರ್ಧಿ ಕೊರಿಯಾದ ಸಂಗ್‌ ಜಿ ಹ್ಯೂನ್‌ ಅವರನ್ನು 21–10, 21–16ರಿಂದ ಮಣಿಸಿದರು. ಪಿ.ವಿ.ಸಿಂಧು ಜಪಾನ್‌ನ ಸಯಾಕ ಸಟೊ ಎದುರು 21–17, 14–21, 21–18ರಿಂದ ಜಯ ಸಾಧಿಸಿದರು.

ಪ್ರಣಯ್‌, ಕಶ್ಯಪ್‌ಗೆ ಸೋಲು: ಎಚ್‌.ಎಸ್.ಪ್ರಣಯ್‌ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ರಾಜೀವ್ ಔಸೇಫ್‌ ಎದುರು 21–19, 21–13ರಿಂದ ಸೋಲು ಅನುಭವಿಸಿದರು.

ಕಶ್ಯಪ್‌, ಕೊರಿಯಾದ ಸೋನ್ ವ್ಯಾನ್‌ ಹೊ ಎದುರು 21–18, 14–21, 21–15ರಿಂದ ಸೋಲನುಭವಿಸಿದರು. ಅಜಯ್‌  ಹಾಂಗ್‌ಕಾಂಗ್‌ನ ಕಾ ಲಾಂಗ್‌ ಅಂಗಸ್‌ ಎದುರು 14–21, 21–10, 21–9ರಿಂದ ಸೋತರು. ಡೆನ್ಮಾರ್ಕ್‌ನ ಕ್ರಿಶ್ಚಿಯನ್‌ ಸೋಲ್ಬರ್ಗ್‌ ಅವರು ಸಿರಿಲ್ ವರ್ಮಾ ಅವರನ್ನು 21–16, 21–8ರಿಂದ ಸೋಲಿಸಿದರು. 

ಅಶ್ವಿನಿ ಪೊನ್ನಪ್ಪಗೆ ಸಿಹಿ–ಕಹಿ: ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮೊದಲ ದಿನ ಮಿಶ್ರ ಫಲ ಅನುಭವಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಅವರು ಜಯ ಗಳಿಸಿದರೆ ಮಿಶ್ರ ಡಬಲ್ಸ್‌ನಲ್ಲಿ ಸೋಲು ಕಂಡರು. ಡಬಲ್ಸ್‌ನಲ್ಲಿ ಅಶ್ವಿನಿ ಮತ್ತು ಎನ್‌.ಸಿಕ್ಕಿ ರೆಡ್ಡಿ ಆತಿಥೇಯ ಹ್ಸುವಾನ್‌ ಯು ವೆಂಡಿ ಮತ್ತು ಜೆನಿಫರ್‌ ಟ್ಯಾಮ್ ಅವರನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.