ADVERTISEMENT

ಏಪ್ರಿಲ್‌ 26ರಿಂದ ಕ್ರೀಡಾ ಪ್ರಾಧಿಕಾರದಲ್ಲಿ ಆಯ್ಕೆ ಟ್ರಯಲ್ಸ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST

ಬೆಂಗಳೂರು: ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯಲು ಆಯ್ದ ಕ್ರೀಡೆಗಳಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಏಪ್ರಿಲ್‌ 26ರಿಂದ ಮೂರು ದಿನ ಆಯ್ಕೆ ಟ್ರಯಲ್ಸ್‌ ನಡೆಯಲಿದೆ.

ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್ ಮತ್ತು ಟೇಕ್ವಾಂಡೊ ಕ್ರೀಡೆಗಳಿಗೆ ಆಯ್ಕೆ ಮಾಡಲು 26ರಿಂದ 28ರ ವರೆಗೆ ಟ್ರಯಲ್ಸ್‌ ನಡೆಯಲಿದೆ. ಮೇ 17ರಿಂದ 20ರ ವರೆಗೆ ಹಾಕಿ ಕ್ರೀಡೆಗೆ ಟ್ರಯಲ್ಸ್‌ ಆಯೋಜನೆಯಾಗಿದೆ.

ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿದವರು 2017ರ ಜನವರಿ 1ರ ಅಂತ್ಯಕ್ಕೆ 14 ರಿಂದ 25 ವರ್ಷದ ಒಳಗಿನವರು ಆಗಿರಬೇಕು.
ಅಧಿಕೃತ ರಾಷ್ಟ್ರೀಯ ಕ್ರೀಡಾ ಫೆಡ ರೇಷನ್‌ಗಳು ನಡೆಸಿದ್ದ  ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಮೊದಲ ನಾಲ್ಕರ ಒಳಗೆ ಸ್ಥಾನ ಪಡೆದಿರಬೇಕು.

ADVERTISEMENT

ಎಐಯು ಮತ್ತು ಎಸ್‌ಜಿಎಫ್‌ಐ ಆಯೋಜಿಸುವ ವಾರ್ಸಿಟಿ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಮೂರರಲ್ಲಿ ಸ್ಥಾನ ಇಲ್ಲವೇ ಅಂತರರಾಷ್ಟ್ರೀಯ ಕ್ರೀಡಾ ಫೆಡ ರೇಷನ್‌ಗಳು ಸಂಘಟಿಸುವ  ಅಂತರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿ ಸಿರುವ ಸ್ಪರ್ಧಿಗಳು ಆಯ್ಕೆ ಟ್ರಯಲ್ಸ್‌ ಅರ್ಜಿ ಸಲ್ಲಿಸಲು ಅರ್ಹರು ಎಂದು ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇ ಶಕ ಫಿಲಿಕ್ಸ್‌ ಡಿಸೋಜಾ ತಿಳಿಸಿದ್ದಾರೆ. ತಂಡ ವಿಭಾಗದ ಸ್ಪರ್ಧೆಗಳಿಗೂ ಇದೇ ಮಾನದಂಡ ಅನ್ವಯವಾಗಲಿದೆ.

‘ಕ್ರೀಡಾಪಟುಗಳು ಟ್ರಯಲ್ಸ್‌ಗೆ ಬರು ವಾಗ ಕ್ರೀಡಾ ಸಾಧನೆಯ ಪ್ರಮಾಣ ಪತ್ರಗಳು, ಜನನ ಪ್ರಮಾಣ ಪತ್ರ ಅಥವಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವಾಸಸ್ಥಳ ಪ್ರಮಾಣ ಪತ್ರ ಮತ್ತು ವಿದ್ಯಾ ರ್ಹತೆ ಪತ್ರಗಳನ್ನು ತರಬೇಕು. ತಮ್ಮ ಕ್ರೀಡೆಯ ಕಿಟ್‌ಗಳನ್ನೂ ತರಬೇಕು. ಆಯ್ಕೆಯಾದ ಕ್ರೀಡಾಪಟುಗಳಿಗೆ ವಸತಿ,  ಊಟದ ಸೌಲಭ್ಯ ಮತ್ತು ಕಿಟ್‌ಗಳನ್ನು ನೀಡಿ ಪ್ರಾಧಿಕಾರದ ನಿಯಮಾವಳಿ ಪ್ರಕಾರ ಸೌಲಭ್ಯಗಳನ್ನು ಕೊಡಲಾಗು ವುದು’ ಎಂದು ಡಿಸೋಜಾ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಾಯ್‌ ಪ್ರಭಾರ ಸಿಒಇ ವೈ.ಎಸ್‌. ಲಕ್ಷ್ಮೀಶ ದೂರವಾಣಿ  080–23213120 ಅಥವಾ 23215 647 ಅವರನ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.