ADVERTISEMENT

ಏರ್‌ ಇಂಡಿಯಾಗೆ ಜಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ಬೆಂಗಳೂರು: ಪಿ.ವಿ ಶ್ರೀಕಾಂತ್‌ ಹಾಗೂ ಬಾಲಾಜಿ ಅವರ ಅಮೋಘ ಗೋಲುಗಳ ಬಲದಿಂದ ಏರ್‌ ಇಂಡಿಯಾ ತಂಡ ಇಲ್ಲಿ ನಡೆಯುತ್ತಿರುವ ಬಿಎಚ್‌ಎ ವತಿಯ ‘ಬಿ’ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಬುಧವಾರ ಜಯದಾಖಲಿಸಿದೆ.

ಏರ್‌ ಇಂಡಿಯಾ ‘ಬಿ’ ತಂಡ 6–0 ಗೋಲುಗಳಲ್ಲಿ ಐಡಿಯಲ್ ಸ್ಪೋರ್ಟ್ಸ್‌ ಕ್ಲಬ್‌, ಕೆಜಿಎಫ್‌ ‘ಬಿ’ ತಂಡವನ್ನು ಮಣಿಸಿತು.

ವಿಜಯೀ ತಂಡಕ್ಕೆ ತ್ಯಾಗರಾಜು (17ನೇ ನಿ.) ತಂಡದ ಆರಂಭಿಕ ಗೋಲು ಗಳಿಸಿದರು. ಬಳಿಕ ಪಿ.ವಿ ಶ್ರೀಕಾಂತ್‌ (19, 20ನೇ ನಿ.) ಎರಡು ಗೋಲು ಗಳಿಸಿದರೆ, ಬಾಲಾಜಿ (29, 45, 49ನೇ ನಿ.) ಮೂರು ಗೋಲುಗಳನ್ನು ಹೊಡೆದರು.

ADVERTISEMENT

ಶುಕ್ರವಾರದ ಪಂದ್ಯಗಳು: ಓಂ ಸಾಯ್‌ ಎಚ್‌ಸಿ, ಧಾರವಾಡ ಮತ್ತು ಎಸ್‌ಬಿಐ. ಸಮಯ ಮಧ್ಯಾಹ್ನ: 2.00ಕ್ಕೆ

ಬೆಂಗಳೂರು ಫ್ರೆಂಡ್ಸ್‌ ಕ್ಲಬ್‌ ಮತ್ತು ಧ್ಯಾನ್‌ಚಂದ್‌ ಎಚ್‌.ಸಿ, ತುಮಕೂರು. ಸಮಯ. ಮಧ್ಯಾಹ್ನ: 3.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.