ADVERTISEMENT

ಏಷ್ಯನ್ ಬ್ಯಾಡ್ಮಿಂಟನ್‌: ಸಿಂಧು ಮೇಲೆ ಹೆಚ್ಚಿದ ನಿರೀಕ್ಷೆ

ಪಿಟಿಐ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಏಷ್ಯನ್‌ ಬ್ಯಾಡ್ಮಿಂಟನ್‌ನಲ್ಲಿ ಸಿಂಧು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ
ಏಷ್ಯನ್‌ ಬ್ಯಾಡ್ಮಿಂಟನ್‌ನಲ್ಲಿ ಸಿಂಧು ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ   

ವುಹಾನ್‌, ಚೀನಾ:  ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಇಂಡಿಯಾ ಓಪನ್‌ ಟೂರ್ನಿಯಲ್ಲಿ ಬೆಳ್ಳಿ ಹೀಗೆ ಮೇಲಿಂದ ಮೇಲೆ ಹಲವಾರು ಪದಕ ಗಳನ್ನು ಜಯಿಸಿರುವ ಭರವಸೆಯ ಆಟಗಾರ್ತಿ ಪಿ.ವಿ. ಸಿಂಧು ಮಂಗಳವಾರ ಇಲ್ಲಿ ಆರಂಭವಾಗಲಿರುವ ಏಷ್ಯಾ ಬ್ಯಾಡ್ಮಿಂ ಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಭರವಸೆ ಎನಿಸಿದ್ದಾರೆ.

ಹೈದರಾಬಾದ್‌ನ ಸಿಂಧು ಹೋದ ವರ್ಷ ಮಲೇಷ್ಯಾ ಮಾಸ್ಟರ್ಸ್‌, ಚೀನಾ ಓಪನ್‌ ಮತ್ತು  ಸೈಯದ್‌ ಮೋದಿ ಅಂತ ರರಾಷ್ಟ್ರೀಯ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಹಾಂಕಾಂಗ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಸ್ಥಾನ ಗಳಿಸಿದ್ದರು. 

ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಸಿಂಧು ಸಿಂಗಪುರ ಓಪನ್‌ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಹೀಗೆ ಸ್ಥಿರ ಆಟವಾಡುತ್ತಿರುವ ಕಾರಣ ಭಾರತದ ಆಟಗಾರ್ತಿ ಇಲ್ಲಿಯೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ.

21 ವರ್ಷದ ಸಿಂಧು ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೊ ನೇಷ್ಯಾದ ಡಿನಾರ್‌ ಡೆಹ್‌ ಅಸ್ಟಿಯಿನೆ ಎದುರು ಪೈಪೋಟಿ ನಡೆಸಲಿದ್ದಾರೆ.

ಸೈನಾಗೆ ಅಗ್ನಿಪರೀಕ್ಷೆ: ಗಾಯದ ಸಮಸ್ಯೆಯಿಂದ ಈಗಷ್ಟೇ ಚೇತರಿಸಿಕೊಂಡಿರುವ ಸೈನಾ ನೆಹ್ವಾಲ್‌ ಅವರಿಗೆ  ಟೂರ್ನಿ ಅಗ್ನಿಪರೀಕ್ಷೆಯಾಗಿದೆ. ಇತ್ತೀಚೆಗೆ ನಡೆದ ಮಲೇಷ್ಯಾ ಓಪನ್‌ ಟೂರ್ನಿಯಲ್ಲಿ ಸೈನಾ ಮೊದಲ ಸುತ್ತಿ ನಲ್ಲಿಯೇ ಮುಗ್ಗರಿಸಿದ್ದರು. ಸಿಂಗಪುರ ಸರಣಿಯಲ್ಲಿ ಆಡದೇ ವಿಶ್ರಾಂತಿ ಪಡೆದಿದ್ದ ಅವರು ಇಲ್ಲಿ ಆರಂಭದ ಸುತ್ತಿನಲ್ಲಿ ಜಪಾನ್‌ನ ಸಯಾಕ ಸಟೊ ಎದುರು ಆಡಲಿದ್ದಾರೆ.

ವಿಶ್ವ ರ‍್ಯಾಂಕ್‌ನಲ್ಲಿ ಎಂಟನೇ ಸ್ಥಾನ ಹೊಂದಿರುವ ಸೈನಾ, ಜಪಾನ್‌ ಆಟಗಾರ್ತಿಯ ಎದುರು ಉತ್ತಮ ಗೆಲುವಿನ ದಾಖಲೆ ಹೊಂದಿದ್ದಾರೆ. ಇಬ್ಬರೂ ಏಳು ಬಾರಿ ಮುಖಾಮುಖಿಯಾಗಿದ್ದು ಸೈನಾ ಆರು ಸಲ ಗೆಲುವು ಪಡೆದಿದ್ದಾರೆ.

ವಿಶ್ವ ರ‍್ಯಾಂಕ್‌ನಲ್ಲಿ  13ನೇ ಸ್ಥಾನ ಪಡೆ ದಿರುವ ಅಜಯ್‌ ಜಯರಾಮ್‌ ಪುರು ಷರ ವಿಭಾಗದಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಇವರು  ಚೀನಾ ಟಿಯಾನ್‌ ಹೌವೇಯಿ ವಿರುದ್ಧ ಆಡ ಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಸಿಕ್ಕಿ ಮತ್ತು ಕರ್ನಾಟಕದ ಅಶ್ವಿನಿ ಪೊನ್ನಪ್ಪ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT