ADVERTISEMENT

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಮಾಲ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 10:17 IST
Last Updated 1 ಏಪ್ರಿಲ್ 2015, 10:17 IST
ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಮಾಲ್‌ ರಾಜೀನಾಮೆ
ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಮಾಲ್‌ ರಾಜೀನಾಮೆ   

ಢಾಕಾ (ಪಿಟಿಐ): ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ಟ್ರೋಫಿ ಪ್ರದಾನ ವಿವಾದದಿಂದ ಬೇಸತ್ತಿರುವ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಅಧ್ಯಕ್ಷ ಮುಸ್ತಫಾ ಕಮಾಲ್‌ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ಐಸಿಸಿಯಲ್ಲಿ ನಿಯಮದ ಪ್ರಕಾರ ಏನೂ ನಡೆಯುತ್ತಿಲ್ಲ. ಹೀಗಾಗಿ ನಾನು ಐಸಿಸಿಗೆ ರಾಜೀನಾಮೆ ಪತ್ರ ಕಳಿಸಿದ್ದೇನೆ’ ಎಂದು ಕಮಾಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ನಿಯಮದ ಪ್ರಕಾರ ವಿಜೇತ ತಂಡಕ್ಕೆ ನಾನು ಟ್ರೋಫಿ ಪ್ರದಾನ ಮಾಡಬೇಕಿತ್ತು. ಆದರೆ, ನನ್ನನ್ನು ಟ್ರೋಫಿ ಪ್ರದಾನ ಕಾರ್ಯಕ್ರಮದಿಂದಲೇ ದೂರ ಇಡಲಾಯಿತು’ ಎಂದು ಕಮಾಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಜಯಗಳಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಅವರಿಗೆ ಐಸಿಸಿ ಮುಖ್ಯಸ್ಥ ಶ್ರೀನಿವಾಸನ್‌ ಅವರು ಟ್ರೋಫಿ ಪ್ರದಾನ ಮಾಡಿದ್ದರು.

ಮರುದಿನ ಕಮಾಲ್‌ ಅವರು, ನಿಯಮಗಳ ಪ್ರಕಾರ ತಾವು ಟ್ರೋಫಿ ಪ್ರದಾನ ಮಾಡಬೇಕಿತ್ತು. ಆದರೆ ತನ್ನನ್ನು ವ್ಯವಸ್ಥಿತವಾಗಿ ದೂರ ಇಡಲಾಯಿತು ಎಂದು ದೂರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.