ADVERTISEMENT

ಐಸಿಸಿ ರ್‌್ಯಾಂಕಿಂಗ್: ಭಾರತಕ್ಕೆ ಜಯ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST

ದುಬೈ (ಪಿಟಿಐ): ವಿಶ್ವ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಮೊದಲ ಎರಡು ಸ್ಥಾನಗಳನ್ನು ಹೊಂದಿರುವ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಈಗಿನ ಸ್ಥಾನಗಳಲ್ಲಿಯೇ ಉಳಿಯಬೇಕಾದರೆ ಮುಂಬರುವ ಟೆಸ್ಟ್‌ ಸರಣಿಯಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ.

ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ವಿಂಡೀಸ್‌ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಮೊದಲ ಟೆಸ್ಟ್‌ ಗುರುವಾರ ಆ್ಯಂಟಿಗಾದಲ್ಲಿ ಆರಂಭವಾಗಲಿದೆ.

ಅಗ್ರಸ್ಥಾನ ಹೊಂದಿರುವ ಕಾಂಗರೂಗಳ ನಾಡಿನ ತಂಡ ಜುಲೈ 26ರಿಂದ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ.
ವಿಂಡೀಸ್ ತಂಡ 44 ಪಾಯಿಂಟ್ಸ್‌ನಿಂದ ಈಗ ರ್‍ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿದೆ.

33 ಪಾಯಿಂಟ್ಸ್‌ ಹೊಂದಿರುವ ಶ್ರೀಲಂಕಾ ಏಳನೇ ಸ್ಥಾನದಲ್ಲಿದೆ. ಒಂದು ವೇಳೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಸರಣಿಯನ್ನು ಗೆದ್ದುಕೊಳ್ಳುವಲ್ಲಿ ಒಂದು ವೇಳೆ ವಿಫಲರಾದರೆ ಪಾಯಿಂಟ್‌ಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ಭಾರತ ತಂಡ 3–0 ಅಂತರದಿಂದ ಕೆರಿಬಿಯನ್‌ ನಾಡಿನ ತಂಡವನ್ನು ಮಣಿಸಿದರೆ ಒಟ್ಟು 112 ಪಾಯಿಂಟ್ಸ್‌ ಪಡೆದುಕೊಳ್ಳಲಿದೆ. 3–1 ಅಥವಾ 2–0ರಲ್ಲಿ ಸರಣಿ ಜಯಿಸಿದರೆ 110 ಪಾಯಿಂಟ್ಸ್‌ಗೆ ಕುಸಿಯಲಿದೆ.  ವೆಸ್ಟ್ ಇಂಡೀಸ್ ತಂಡವು ಇತ್ತೀಚೆಗೆ ನಿಗದಿಯ ಓವರ್‌ಗಳ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆ.  ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.