ADVERTISEMENT

ಐ ಲೀಗ್‌: ಬಿಎಫ್‌ಸಿಗೆ ಸೋಲು

ಪಿಟಿಐ
Published 22 ಜನವರಿ 2017, 19:55 IST
Last Updated 22 ಜನವರಿ 2017, 19:55 IST

ಬರಾಸತ್‌, ಪಶ್ಚಿಮ ಬಂಗಾಳ:  ತವರಿನಲ್ಲಿ ಗೆಲುವಿನ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ್ದ ಬೆಂಗಳೂರು ಫುಟ್‌ ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡಕ್ಕೆ ಈ ಬಾರಿಯ ಐ ಲೀಗ್‌ ಟೂರ್ನಿಯಲ್ಲಿ ಮೊದಲ ಸೋಲು ಎದುರಾಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ತಂಡ 2–1 ಗೋಲುಗಳಿಂದ ಹಾಲಿ ಚಾಂಪಿಯನ್ನರಿಗೆ ಆಘಾತ ನೀಡಿತು.

ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸುವ ತಂತ್ರ ಅನುಸರಿಸಿದ ಸುನಿಲ್‌ ಚೆಟ್ರಿ ಬಳಗಕ್ಕೆ 23ನೇ ನಿಮಿಷದಲ್ಲಿ ಯಶಸ್ಸು ಲಭಿಸಿತು. ಸಹ ಆಟಗಾರ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಸ್ಟ್ರೈಕರ್‌ ಸಿ.ಕೆ. ವಿನೀತ್‌ ಅದನ್ನು ಲೀಲಾಜಾಲವಾಗಿ ಗುರಿ ಮುಟ್ಟಿ ಸಿದರು. ನಂತರವೂ ತುಂಬು ವಿಶ್ವಾಸದಿಂದ ಆಡಿದರು.

ADVERTISEMENT

ಆದರೆ ಈ ಖುಷಿ ಹಾಲಿ ಚಾಂಪಿಯನ್ನರ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಆತಿಥೇಯ ಆಟಗಾ ರರು ಅವಕಾಶ ನೀಡಲಿಲ್ಲ. 28ನೇ ನಿಮಿಷ ದಲ್ಲಿ ಇವಾನ್‌ ಬುಕೆನ್ಯಾ ಗೋಲು ದಾಖ ಲಿಸಿ 1–1ರ ಸಮಬಲಕ್ಕೆ ಕಾರಣರಾದರು.

ಆ ನಂತರ ಎರಡೂ ತಂಡಗಳು ಮುನ್ನಡೆಯ ಗೋಲಿಗಾಗಿ ಜಿದ್ದಾಜಿದ್ದಿನ ಪೈಪೋಟಿಗೆ ಮುಂದಾ ದವು. 79ನೇ ನಿಮಿಷದಲ್ಲಿ ಸ್ಟ್ರೈಕರ್‌ ರಾಬಿನ್‌ ಸಿಂಗ್‌ ಗೋಲು ಬಾರಿಸಿ ಬಿಎಫ್‌ಸಿ ಗೆಲುವಿನ ಆಸೆಗೆ ತಣ್ಣೀರು ಸುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.