ADVERTISEMENT

‘ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಲಿ’

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
‘ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಲಿ’
‘ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಲಿ’   

ನವದೆಹಲಿ: ಹೆಚ್ಚು ರಾಷ್ಟ್ರಗಳು ಕ್ರಿಕೆಟ್ ಆಡಲು ಮುಂದಾಗಿ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಯನ್ನು ಸೇರಿಸಲು ಪ್ರಯತ್ನ ನಡೆಸಬೇಕು ಎಂದು ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಲಹೆ ನೀಡಿದರು.

‘ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ (ಐಸಿಸಿ) ಪೂರ್ಣ ಸದಸ್ಯತ್ವ ಗಳಿಸಲು ರಾಷ್ಟ್ರಗಳು ಮುಂದಾಗಬೇಕು ಎಂಬುದು ಐಸಿಸಿ ಬಯಕೆ. ಇದಕ್ಕೆ ಕ್ರೀಡಾಭಿಮಾನ ಇರುವ ದೇಶಗಳು ಮುಂದಾಗಬೇಕು. ಇದು ಸಾಧ್ಯವಾದರೆ ಒಲಿಂಪಿಕ್ಸ್‌ನಲ್ಲಿ ಸುಲಭವಾಗಿ ಕ್ರಿಕೆಟ್ ಸೇರ್ಪಡೆಯಾಗಬಹುದು’ ಎಂದರು.

ಐಸಿಸಿಯಲ್ಲಿ 105 ಸದಸ್ಯ ರಾಷ್ಟ್ರಗಳು ಇವೆ. 12 ರಾಷ್ಟ್ರಗಳು ಪೂರ್ಣ ಸದಸ್ಯತ್ವ ಗಳಿಸಿವೆ. 2024ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.