ADVERTISEMENT

ಕಬಡ್ಡಿ: ಎಚ್‌.ಎಂ.ಟಿ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ರೆಡ್‌ ಬುಲ್‌ ತಶಾನ್‌ ಸಂಸ್ಥೆ ಕ್ಲಬ್‌ ಮತ್ತು ಕಾಲೇಜು ಮಟ್ಟದವರಿಗಾಗಿ ಆಯೋಜಿಸಿದ್ದ ಕಬಡ್ಡಿ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡ ಎಚ್‌.ಎಂ.ಟಿ. ಕಾಲೊನಿ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು
ರೆಡ್‌ ಬುಲ್‌ ತಶಾನ್‌ ಸಂಸ್ಥೆ ಕ್ಲಬ್‌ ಮತ್ತು ಕಾಲೇಜು ಮಟ್ಟದವರಿಗಾಗಿ ಆಯೋಜಿಸಿದ್ದ ಕಬಡ್ಡಿ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡ ಎಚ್‌.ಎಂ.ಟಿ. ಕಾಲೊನಿ ತಂಡದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು   

ಬೆಂಗಳೂರು: ರೋಚಕ ಹಣಾಹಣಿಯಲ್ಲಿ ಕ್ಲಾಸಿಕ್ ನ್ಯಾಷನಲ್ಸ್‌ ತಂಡವನ್ನು ಮಣಿಸಿದ ಎಚ್‌.ಎಂ.ಟಿ. ಕಾಲೊನಿ ತಂಡದವರು ರೆಡ್‌ ಬುಲ್‌ ತಶಾನ್‌ ಸಂಸ್ಥೆ ಕ್ಲಬ್‌ ಮತ್ತು ಕಾಲೇಜು ಮಟ್ಟದವರಿಗಾಗಿ ಆಯೋಜಿಸಿದ್ದ ಕಬಡ್ಡಿ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಕಸವನಹಳ್ಳಿಯಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಈ ತಂಡ ಕ್ಲಾಸಿಕ್ ನ್ಯಾಷನಲ್ಸ್ ವಿರುದ್ಧ 30–28 ಪಾಯಿಂಟ್‌ಗಳಿಂದ ಗೆದ್ದಿತು.

ಪ್ರಥಮಾರ್ಧದಲ್ಲಿ ಎಚ್‌.ಎಂ.ಟಿ ಆರು ಪಾಯಿಂಟ್‌ಗಳಿಂದ ಹಿಂದಿತ್ತು. ಉತ್ತಮ ರೈಡರ್‌ ಪ್ರಶಸ್ತಿ ಗಳಿಸಿದ ಅರುಣ್‌, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೆಮಿಫೈನಲ್‌ ಪಂದ್ಯಗಳಲ್ಲಿ ಎಚ್‌.ಎಂ.ಟಿ ತಂಡ ನ್ಯಾಷನಲ್ಸ್ ಸ್ಪೋರ್ಟ್ಸ್‌ ಕ್ಲಬ್‌ ವಿರುದ್ಧ 39–24ರಿಂದ ಮತ್ತು ಕ್ಲಾಸಿಕ್ ನ್ಯಾಷನಲ್ಸ್‌ ತಂಡ, ಜರಗನಹಳ್ಳಿಯ ವೈ.ಎಫ್‌.ಎ ವಿರುದ್ಧ 44–23ರಿಂದ ಜಯ ಸಾಧಿಸಿತು.

ಮೊದಲ ಸೆಮಿಫೈನಲ್‌ನಲ್ಲಿ ಆರಂಭದಿಂದಲೇ ಎಚ್‌.ಎಂ.ಟಿ ಆಧಿಪತ್ಯ ಸಾಧಿಸಿತ್ತು. ಪ್ರಥಮಾರ್ಧದಲ್ಲಿ 26–10ರಿಂದ ಮುನ್ನಡೆ ಸಾಧಿಸಿದ ತಂಡಕ್ಕೆ ದ್ವಿತೀಯಾರ್ಧದಲ್ಲಿ ಎದುರಾಳಿಗಳು ಪ್ರಬಲ ಪೈಪೋಟಿ ಒಡ್ಡಿದರು. ಪ್ರೊ.ಕಬಡ್ಡಿ ಲೀಗ್‌ನ ಫ್ರಾಂಚೈಸಿಗಳಲ್ಲಿ ಒಂದಾದ ಬೆಂಗಳೂರು ಬುಲ್ಸ್‌ ಯುವ ಕಬಡ್ಡಿ ಪ್ರತಿಭೆಗಳ ಶೋಧಕ್ಕಾಗಿ ಈ ಟೂರ್ನಿ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.