ADVERTISEMENT

ಕಮ್ರನ್‌ಗೆ ಸ್ಥಾನವಿಲ್ಲ

ಏಜೆನ್ಸೀಸ್
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಲಾಹೋರ್‌ : ಆರಂಭಿಕ ಬ್ಯಾಟ್ಸ್‌ಮನ್‌ ಕಮ್ರನ್‌ ಅಕ್ಮಲ್‌ ಅವರನ್ನು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ತಂಡದಿಂದ ಕೈಬಿಡಲಾಗಿದೆ. ಇವರ ಸಹೋದರ ಉಮರ್‌ ಅಕ್ಮಲ್‌ಗೆ 15 ಸದಸ್ಯರು ಒಳಗೊಂಡ ತಂಡದಲ್ಲಿ ಸ್ಥಾನ ಲಭಿಸಿದೆ.

ವೆಸ್ಟ್‌ ಇಂಡೀಸ್ ವಿರುದ್ಧ ಇತ್ತೀಚೆಗೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕ್‌ 2–1ರಲ್ಲಿ ಗೆದ್ದು ಕೊಂಡಿತ್ತು. ಆಗ 35 ವರ್ಷದ ಕಮ್ರನ್‌ ತಂಡದಲ್ಲಿದ್ದರು.

ತಂಡ ಹೀಗಿದೆ: ಸರ್ಫರಾಜ್‌ ಅಹ್ಮದ್‌ (ನಾಯಕ), ಅಜರ್‌ ಅಲಿ, ಅಹ್ಮದ್‌ ಶೆಹ್ಜಾದ್‌, ಮೊಹಮ್ಮದ್ ಹಫೀಜ್‌, ಬಾಬರ್‌ ಅಜಮ್‌, ಶೊಯಬ್‌ ಮಲಿಕ್‌, ಉಮರ್‌ ಅಕ್ಮಲ್‌, ಫಖಾರ್‌ ಜಮಾನ್‌, ಇಮಾದ್‌ ವಾಸಿಮ್‌, ಹಸನ್‌ ಅಲಿ, ಫಹೀಮ್‌ ಅಶ್ರಫ್‌, ವಹಾಬ್‌ ರಿಯಾಜ್‌, ಮೊಹಮ್ಮದ್‌ ಅಮೀರ್‌, ಜುನೈದ್ ಖಾನ್‌ ಮತ್ತು ಶಹಬದ್‌ ಖಾನ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.