ADVERTISEMENT

ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಮುನ್ನಡೆಸಲಿರುವ ವಿರೇಂದ್ರ ಸೆಹ್ವಾಗ್‌

ಪಿಟಿಐ
Published 23 ಜನವರಿ 2017, 10:32 IST
Last Updated 23 ಜನವರಿ 2017, 10:32 IST
ವಿರೇಂದ್ರ ಸೆಹ್ವಾಗ್‌
ವಿರೇಂದ್ರ ಸೆಹ್ವಾಗ್‌   

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ ಅವರು ಮುಂಬರುವ ಐಪಿಎಲ್‌ ಅವೃತ್ತಿಯಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಮಾರ್ಗದರ್ಶಕರಾಗಿ ಆಯ್ಕೆಯಾಗಿದ್ದಾರೆ.

ಕಿಂಗ್ಸ್‌ ಇಲೆವನ್‌ ಪಂಜಾಬ್‌ ಫ್ರಾಂಚೈಸಿಯ ಪ್ರಮುಖ ರಾಯಭಾರಿಯಾಗಿಯೂ ತಂಡವನ್ನು ಮುನ್ನಡೆಸಲ್ಲಿದ್ದಾರೆ.

‘ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ನನ್ನ ಹೃದಯಕ್ಕೆ ಹತ್ತಿರವಾದದ್ದು, ಬಹಳ ಹಿಂದಿನಿಂದಲ್ಲೂ ಉತ್ತಮ ಭಾಂದವ್ಯ ಹೊಂದಿದ್ದೇನೆ. ಆದ್ದರಿಂದ ಯುವ ಆಟಗಾರರಿಂದ ಕೂಡಿರುವ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಶ್ರೇಷ್ಠವಾದದ್ದು’ ಎಂದು ಸೆಹ್ವಾಗ್‌ ಹೇಳಿದ್ದಾರೆ.

ಐಪಿಎಲ್‌ ಎಂಟನೇ ಆವೃತ್ತಿಯಿಂದ ಇಲ್ಲಿವರೆಗೂ ಸೆಹ್ವಾಗ್‌ ಪಂಜಾಬ್‌ ಫ್ರಾಂಚೈಸಿಯ ಪರವಾಗಿಯೇ ಕಾರ್ಯನಿರ್ವಹಿಸಿದ್ದು, ಇದು ಮೂರನೇ ಆವೃತ್ತಿಯಾಗಿದೆ.

ಆಪಾರ ಅನುಭವ, ಪರಿಣತಿವುಳ್ಳ ವಿರೇಂದ್ರ ಸೆಹ್ವಾಗ್‌ ನಮ್ಮ ತಂಡದ ಮಾರ್ಗದರ್ಶಕರಾಗಿ ಆಯ್ಕೆಯಾದದ್ದು ಹೆಮ್ಮೆಯ ವಿಚಾರ ಎಂದು ಪಂಜಾಬ್‌ ತಂಡದ ಪ್ರವರ್ತಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.