ADVERTISEMENT

ಕಿರಿಯರ ಕೊಕ್ಕೊ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:30 IST
Last Updated 8 ಅಕ್ಟೋಬರ್ 2015, 19:30 IST

ಚನ್ನಗಿರಿ:  ಪಟ್ಟಣದಲ್ಲಿ 18 ವರ್ಷದೊಳ ಗಿನ ರಾಜ್ಯ ಮಟ್ಟದ ಕಿರಿಯ ಬಾಲಕರ ಮತ್ತು ಬಾಲಕಿಯರ ಹೊನಲು ಬೆಳಕಿನ ಕೊಕ್ಕೊ ಪಂದ್ಯಾವಳಿ ಶುಕ್ರವಾರ ಆರಂಭವಾಗಲಿದೆ. ರಾಜ್ಯ ಕೊಕ್ಕೊ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಚಿರಂಜೀವಿ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಪ್ರತಿ ದಿನ ಸಂಜೆ 6.30ರಿಂದ ಸ್ಪರ್ಧೆಗಳು ನಡೆಯಲಿವೆ.

ಬಾಲಕರ ವಿಭಾಗದ 22 ಹಾಗೂ ಬಾಲಕಿಯರ ವಿಭಾಗದ 23 ತಂಡಗಳು ಸೇರಿ 45 ತಂಡಗಳು ಭಾಗವಹಿಸಲಿವೆ. ಅ. 21ರಿಂದ 25 ವರೆಗೆ ಭುವನೇ ಶ್ವರದಲ್ಲಿ ನಡೆಯಲಿರುವ ರಾಷ್ಟ್ರೀಯ ಪಂದ್ಯಾವಳಿಗೆ ರಾಜ್ಯ ತಂಡವನ್ನು ಈ ಪಂದ್ಯಾವಳಿಯ ನಂತರ ಆಯ್ಕೆ ಮಾಡ ಲಾಗುತ್ತದೆ ಎಂದು ಚಿರಂಜೀವಿ ಕ್ರೀಡಾ ಸಂಸ್ಥೆ ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.