ADVERTISEMENT

ಕೊಕೇನ್‌ ಸೇವಿಸಿ ಸಿಕ್ಕಿಬಿದ್ದ ರಂಗಿ ಚೇಸ್‌

ಏಜೆನ್ಸೀಸ್
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ರಂಗಿ ಚೇಸ್‌
ರಂಗಿ ಚೇಸ್‌   

ಲಂಡನ್: ರಗ್ಬಿ ಸೂಪರ್ ಲೀಗ್‌ನಲ್ಲಿ ಇಂಗ್ಲೆಂಡ್ ಮತ್ತು ವಿಡ್ನೆಸ್‌ ತಂಡವನ್ನು ಪ್ರತಿನಿಧಿಸಿದ್ದ ಹಾಫ್ ಬ್ಯಾಕ್‌ ವಿಭಾಗದ ಆಟಗಾರ ರಂಗಿ ಚೇಸ್‌ ಕೊಕೇನ್ ಸೇವಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಕೊಕೇನ್ ಸೇವನೆ ಮಾಡಿರುವುದು ಸಾಬೀತು ಆಗಿರುವ ಕಾರಣ ಅವರ ಮೇಲೆ ಎರಡು ವರ್ಷ ನಿಷೇಧ ಹೇರಲಾಗಿದೆ. ಇದರೊಂದಿಗೆ ಸೂಪರ್‌ ಲೀಗ್‌ನಲ್ಲಿ ಆಡಿದ ಮೂವರು ಕೊಕೇನ್ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾದಂತಾಗಿದೆ.

ವೇಕ್‌ಫೀಲ್ಡ್ ಎದುರಿನ ಪಂದ್ಯದ ಸಂದರ್ಭದಲ್ಲಿ ಉದ್ದೀಪನ ಮದ್ದು ಸೇವಿಸಿದ ಸಂದೇಹದ ಮೇಲೆ ಜುಲೈ 14ರಂದು ರಂಗಿ ಚೇಸ್‌ ಅವರ ಮಾದರಿಯನ್ನು ಪಡೆದುಕೊಳ್ಳಲಾಗಿತ್ತು. ಅವರು ಕೊಕೇನ್‌ ಒಳಗೊಂಡ ಬೆನ್ಜೊಲೆಕ್‌ಗೊಗೈನ್‌ ಸೇವನೆ ಮಾಡಿರುವುದು ಪರೀಕ್ಷೆಯ ವರದಿಯಲ್ಲಿ ಸಾಬೀತಾಗಿದೆ.

‘ರಗ್ಬಿ ಲೀಗ್‌ನಲ್ಲಿ ಅನುಭವಿ ಆಟಗಾರನಾದ ರಂಗಿ ಅವರ ಮೇಲೆ ಹೇರಲಾದ ಎರಡು ವರ್ಷಗಳ ನಿಷೇಧವು ಎಲ್ಲ ಕ್ರೀಡಾಪಟುಗಳಿಗೆ ಎಚ್ಚರಿಕೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವಾಗ ನಿಷೇಧಿತ ಉದ್ದೀಪನ ಮದ್ದು ಸೇವಿಸುವುದು ಇನ್ನಾದರೂ ನಿಲ್ಲಬೇಕು’ ಎಂದು ಯುಕೆಎಡಿ ಮುಖ್ಯ ಕಾರ್ಯನಿರ್ವಾಹಕ ನಿಕೋಲ್‌ ಸಾಪ್‌ಸ್ಟೆಡ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.