ADVERTISEMENT

ಕೊಹ್ಲಿಯನ್ನು ಹೊಗಳಿದ ದ್ರಾವಿಡ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 19:30 IST
Last Updated 25 ಜುಲೈ 2015, 19:30 IST

ಚೆನ್ನೈ (ಪಿಟಿಐ): ಆಸ್ಟ್ರೇಲಿಯಾ ‘ಎ’ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಡುವುದಾಗಿ ಹೇಳಿರುವ ವಿರಾಟ್‌ ಕೊಹ್ಲಿ ಅವರ ನಿರ್ಧಾರಕ್ಕೆ ರಾಹುಲ್‌ ದ್ರಾವಿಡ್‌ ಸಂತಸ ವ್ಯಕ್ತಪಡಿಸಿದ್ದಾರೆ.

‘ಮುಂಬರುವ ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೆ ಸಜ್ಜುಗೊಳ್ಳುವ ಉದ್ದೇಶದಿಂದ ಕೊಹ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ನಾಯಕನಿಗೆ ಕ್ರಿಕೆಟ್‌ ಬಗ್ಗೆ ಇರುವ ಬದ್ಧತೆ ತಿಳಿಯುತ್ತದೆ’ ಎಂದು ದ್ರಾವಿಡ್‌ ಹೇಳಿದ್ದಾರೆ.

‘ಕೊಹ್ಲಿ ಆಡುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ. ಭಾರತ ‘ಎ’ ತಂಡದಲ್ಲಿ ಒಂದು ಪಂದ್ಯ ಆಡಲು ಬಯಸಿರುವುದಾಗಿ ಅವರು ಎರಡು ವಾರಗಳ ಹಿಂದೆ ನನ್ನ ಬಳಿ ಹೇಳಿದ್ದರು. ಕೊಹ್ಲಿಗೆ ಇಲ್ಲಿ ಒಳ್ಳೆಯ ಅಭ್ಯಾಸವಾಗಲಿದೆ’ ಎಂದು ‘ಎ’ ತಂಡದ ಕೋಚ್‌ ಅಭಿಪ್ರಾಯಪಟ್ಟಿದ್ದಾರೆ.

‘ಕಿರಿಯ ಆಟಗಾರರಿಗೂ ಇದರಿಂದ  ಅನುಕೂಲವಾಗಲಿದೆ. ನಾಯಕನ ಜತೆ ಆಡುವುದರಿಂದ ಅವರೂ ಹೊಸ ಉತ್ಸಾಹದಿಂದ ಆಡುತ್ತಾರೆ. ಕೊಹ್ಲಿಯಿಂದ ಕಿರಿಯ ಆಟಗಾರರು ಹೊಸ ಸಂಗತಿಗಳನ್ನು ಕಲಿಯ ಬಹುದು’ಎಂದು ದ್ರಾವಿಡ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.