ADVERTISEMENT

ಕ್ರಿಕೆಟ್‌: ಬೃಹತ್‌ ಮುನ್ನಡೆಯತ್ತ ಕಿವೀಸ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST

ಬುಲವಾಯೊ (ಎಎಫ್‌ಪಿ): ಟಾಮ್‌ ಲಾಥಮ್‌ (105; 209ಎ, 12ಬೌಂ) ಮತ್ತು ನಾಯಕ ಕೇನ್‌ ವಿಲಿಯಮ್ಸನ್‌ ( 91; 179ಎ, 9ಬೌಂ) ಅವರ ಅಮೋಘ ಜತೆಯಾಟದ ಬಲದಿಂದ ನ್ಯೂಜಿಲೆಂಡ್‌ ತಂಡ ಜಿಂಬಾಬ್ವೆ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಬೃಹತ್‌  ಮುನ್ನಡೆಯತ್ತ ದಾಪುಗಾಲಿಟ್ಟಿದೆ.

ಕ್ವೀನ್ಸ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್‌ ಬಳಗ ಶುಕ್ರವಾರದ ಆಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ  100 ಓವರ್‌ಗಳಲ್ಲಿ 4 ವಿಕೆಟ್‌ಗೆ 315 ರನ್‌ ಗಳಿಸಿದೆ. ಇದರೊಂದಿಗೆ 151 ರನ್‌ಗಳ ಮುನ್ನಡೆ ತನ್ನದಾಗಿಸಿ ಕೊಂಡಿದೆ.  ಮೊದಲು ಬ್ಯಾಟ್‌ ಮಾಡಿದ್ದ ಆತಿಥೇಯ ಜಿಂಬಾಬ್ವೆ 77.5 ಓವರ್‌ಗಳಲ್ಲಿ  164ರನ್‌ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ:ಮೊದಲ ಇನಿಂಗ್ಸ್‌: 77.5 ಓವರ್‌ಗಳಲ್ಲಿ 164.

ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್‌: 
100 ಓವರ್‌ಗಳಲ್ಲಿ 4 ವಿಕೆಟ್‌ಗೆ 315 (ಮಾರ್ಟಿನ್‌ ಗುಪ್ಟಿಲ್‌ 40, ಟಾಮ್‌ ಲಾಥಮ್‌ 105, ಕೇನ್‌ ವಿಲಿಯಮ್ಸನ್‌  91, ರಾಸ್‌ ಟೇಲರ್‌ ಬ್ಯಾಟಿಂಗ್‌ 38, ಹೆನ್ರಿ ನಿಕೊಲಸ್‌ 18; ಹ್ಯಾಮಿಲ್ಟನ್‌ ಮಸಕಜ 25ಕ್ಕೆ1, ಚಾಮು ಚಿಬಾಬ 22ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.