ADVERTISEMENT

ಕ್ರಿಕೆಟ್: ಭಾರತದ ಎರಡು ವಿಕೆಟ್ ಪತನ

‌ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌: ಕೊಹ್ಲಿ ಪಡೆಗೆ ಆರಂಭ ಆಘಾತ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 6:02 IST
Last Updated 25 ನವೆಂಬರ್ 2015, 6:02 IST

ನಾಗಪುರ (ಪಿಟಿಐ): ತೀವ್ರ ಕುತೂಹಲ ಮೂಡಿಸಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯ ಬುಧವಾರ ಆರಂಭಗೊಂಡಿದ್ದು, ಟಾಸ್‌ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ಭಾರತ ಆರಂಭಿಕ ಆಘಾತ ಅನುಭವಿಸಿದೆ.

26 ಓವರ್‌ಗಳ ಅಂತ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 82 ಕಲೆ ಹಾಕಿ ಆಡುತ್ತಿದೆ. ವಿರಾಟ್ ಕೊಹ್ಲಿ (10) ಹಾಗೂ ಚೇತೇಶ್ವರ್ ಪೂಜಾರ್ (16) ಕ್ರೀಸ್‌ನಲ್ಲಿದ್ದಾರೆ.

‌ಜುಮ್ತಾದ ವಿದರ್ಭ ಕ್ರಿಕೆಟ್ ಸಂಸ್ತೆಯ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು.

ADVERTISEMENT

ಆದರೆ, ಉತ್ತಮ ಆರಂಭದ ನಿರೀಕ್ಷೆ ಹುಸಿಯಾಯಿತು.12 ರನ್‌ ಗಳಿಸಿದ್ದ ಆರಂಭಿಕ ಆಟಗಾರ ಶಿಖರ್ ಧವನ್‌ 14ನೇ ಓವರಿನ ಕೊನೆಯ ಎಸೆತದಲ್ಲಿ ಡೀನ್ ಎಲ್ಗರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ತಾಳ್ಮೆಯ ಆಟದ ಜತೆಗೆ ಅವಕಾಶ ಸಿಕ್ಕಾಗ ಬೌಂಡರಿ, ಸಿಕ್ಸರ್ ಎತ್ತುತ್ತಿದ್ದ ಮತ್ತೊಬ್ಬ ಆರಂಭಿಕ ಆಟಗಾರ ಮುರಳಿ ವಿಜಯ್ (40ರನ್), 23 ಓವರಿನ ಎರಡನೇ ಎಸೆತದಲ್ಲಿ ಮಾರ್ನೆ ಮಾರ್ಕೆಲ್ ಅವರ ಎಲ್‌ಬಿ ಬಲೆಗೆ ಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.