ADVERTISEMENT

ಕ್ವಾರ್ಟರ್‌ ಫೈನಲ್‌ಗೆ ರುತ್‌ ಮಿಷಾ: ಕೋಮಲ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದ ಎಂ. ರೋಹಿತ್‌ ಆಟದ ವೈಖರಿ.
ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದ ಎಂ. ರೋಹಿತ್‌ ಆಟದ ವೈಖರಿ.   

ಬಳ್ಳಾರಿ: ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ (ಕೆಬಿಎ) ವಿ. ರುತ್‌ ಮಿಷಾ ಅವರು ಇಲ್ಲಿ ಗುರುವಾರ ನಡೆದ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ  ಅಗ್ರಶೇಯಾಂಕದ ಆಟಗಾರ್ತಿ ರುತ್‌ 21–9, 21–8ರಲ್ಲಿ ಕೋಮಲ್ ಸಿಂಗ್‌ ದಿವಾನ್‌ ಎದುರು ಗೆಲುವು ಪಡೆದರು.

ಇದೇ ವಯೋಮಾನದಲ್ಲಿ ಎರಡನೇ ಶ್ರೇಯಾಂಕದ ಆರ್‌.ಎನ್‌.ಸವಿತಾ 21–14, 18–21, 21–14ರಲ್ಲಿ ಸ್ಪಂದನಾ ಬೇಕಲ್‌ ಎದುರು ಜಯ ಗಳಿಸಿದರು.

ADVERTISEMENT

ಜಯದ ಓಟ: ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ರಘು ಮರಿಸ್ವಾಮಿ ಮತ್ತು ಡೇನಿಯಲ್‌ ಎಸ್‌. ಫರೀದ್‌ ಗೆಲುವು ಪಡೆದರು.

ರಘು 21–13, 21–11ರಲ್ಲಿ ಪ್ರಣವ ಸತ್ಯನಾರಾಯಣ ಮೇಲೂ, ಎರಡನೇ ಶ್ರೇಯಾಂಕದ ಫರೀದ್ 21–14, 21–13  ಸಿ.ಆರ್‌.ಜ್ಯೋತಿ ಅತ್ರೇಯ ವಿರುದ್ಧವೂ ಜಯ ದಾಖಲಿಸಿದರು.

19 ವರ್ಷದ ಒಳಗಿನವರ ಬಾಲಕರ ವಿಭಾಗದಲ್ಲಿ ಅಗ್ರಶ್ರೇಯಾಂಕದ ಬಿ.ಕಿರಣ್‌ 21–12, 21–13ರಲ್ಲಿ ಎಚ್.ಎನ್‌.ಶಶಾಂಕ್‌ ವಿರುದ್ಧ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ ತಲುಪಿದರು.

ಎರಡನೇ ಶ್ರೇಯಾಂಕದ ನಿಖಿಲ್ ಶ್ಯಾಮ್‌ ಶ್ರೀರಾಮ್‌ 21–2, 21–10 ಜಿ.ಜಯಂತ್‌ ಮೇಲೂ, ಮೈಸೂರಿನ ರಾಮ್‌ ಬ್ಯಾಡ್ಮಿಂಟನ್‌ ಅಕಾಡೆಮಿಯ ಎಂ. ರೋಹಿತ್‌ 21–4, 21–6ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ಶುಭಮ್‌ ಜೈನ್ ವಿರುದ್ಧವೂ ಗೆಲುವು ಸಾಧಿಸಿದರು.

ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅಗ್ರಶ್ರೇಯಾಂಕದ ದೀಪ್ತಿ ರಮೇಶ್‌ ವಿರುದ್ಧ ಆಡಬೇಕಾಗಿದ್ದ ವಿಭಾ ಕಟ್ಟಿಗೆ ಅವರಿಗೆ ವಾಕ್‌ ಓವರ್‌ ದೊರೆತ ಕಾರಣ ನೇರವಾಗಿ ಕ್ವಾರ್ಟರ್‌ ಫೈನಲ್‌ ತಲುಪಿದರು. ಎರಡನೇ ಶ್ರೇಯಾಂಕದ ಸಿ.ವಿ.ರಮ್ಯಾ 21–15,21–8ರಲ್ಲಿ ರಿಶಾ ಆರ್‌.ಶೆಟ್ಟಿ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.