ADVERTISEMENT

ಗಾಲ್ಫ್‌ ಚಾಂಪಿಯನ್‌ಷಿಪ್: ಮುಕೇಶ್‌ಗೆ ಪ್ರಶಸ್ತಿ

ಪಿಟಿಐ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ಮುಕೇಶ್ ಕುಮಾರ್
ಮುಕೇಶ್ ಕುಮಾರ್   

ನವದೆಹಲಿ: ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಮುಕೇಶ್‌ ಕುಮಾರ್‌ ಅವರು ಇಲ್ಲಿ ನಡೆದ ಪ್ಯಾನ್‌ ಸೋನಿಕ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಈ ಮೂಲಕ ಏಷ್ಯನ್‌ ಟೂರ್‌ನಲ್ಲಿ ಟ್ರೋಫಿ ಎತ್ತಿಹಿಡಿದ ಹಿರಿಯ ಗಾಲ್ಫರ್‌ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ದೆಹಲಿ ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಮುಖೇಶ್‌ ಅವರು 206 ಸ್ಕೋರ್‌ ಕಲೆಹಾಕಿ ಮೊದಲ ಸ್ಥಾನ ಗಳಿಸಿದರು.

ಭಾರತದ ಜ್ಯೋತಿ ರಾಂಧವ ಮತ್ತು ರಶೀದ್‌ ಖಾನ್‌ ಅವರು ಜಂಟಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.  208 ಸ್ಕೋರ್‌ ಕಲೆಹಾಕಿದ ಶ್ರೀಲಂಕಾದ ಮಿಥುನ್‌ ಪೆರೇರಾ ನಾಲ್ಕನೇ ಸ್ಥಾನ ದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು.

ADVERTISEMENT

‘ಇಲ್ಲಿ ಪ್ರಶಸ್ತಿ ಗೆದ್ದಿರುವುದರಿಂದ ಅತೀವ ಸಂತಸವಾಗಿದೆ. ಈ ಕ್ಷಣಕ್ಕಾಗಿ ನಾನು 32 ವರ್ಷ ಕಾಯಬೇಕಾಯಿತು. ಪಿಜಿಟಿಐ ಸರ್ಕ್ಯೂಟ್‌ನಲ್ಲಿ ಗೆದ್ದಿರುವ 123 ಟ್ರೋಫಿಗಳಿಗಿಂತಲೂ ಇಲ್ಲಿ ಸಿಕ್ಕ ಪ್ರಶಸ್ತಿ ತುಂಬಾ ವಿಶೇಷವಾದುದು’ ಎಂದು ಮುಖೇಶ್‌ ಹರ್ಷವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.